ಮುಂಗಾರು ಅಧಿವೇಶನ ಬೆಳಗಾವಿಯಲ್ಲಿ ನಡೆಸುವಂತೆ ಸಿಎಂಗೆ ಪತ್ರ: ಸಭಾಪತಿ ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಮುಂಬರುವ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದಿದ್ದು, ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಸರ್ಕಾರ ತಿರ್ಮಾಣ ಮಾಡಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಸರ್ವೇಸಾಮಾನ್ಯವಾಗಿ ಜೂನ್ ನಲ್ಲಿ ಮಾಡಬಹುದು, ಆದರೆ ಈವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ ಜುಲೈನಲ್ಲಿ ಆದರೂ ಅಧಿವೇಶನ ಮಾಡಬೇಕು. ಇನ್ನು ಬೆಳಗಾವಿಯಲ್ಲಿ ಎರಡು ವರ್ಷಗಳ ಹಿಂದೆಯೇ ಅಧಿವೇಶನ ಮಾಡಲಾಗಿದೆ. ಅಲ್ಲದೇ ಬೆಳಗಾವಿಯವರಾದ ಮಾಂತೇಶ ಕವಟಗಿಮಠ ಅವರು ಕೂಡಾ ವಿಶೇಷವಾಗಿ ಅಧಿವೇಶನ ಕರೆಯುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರಣಗಳಿಂದ ಬೆಳಗಾವಿಯಲ್ಲಿ ಮಾಡುವುದು ಸೂಕ್ತ. ಈ ಬಗ್ಗೆ ಸಭಾಧ್ಯಕ್ಷರು ಮತ್ತು ನಾನು ಕೂಡಾ ಒಮ್ಮತ ಸೂಚಿಸಿದ್ದು, ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ಮಾಡುವ ಬಗ್ಗೆ ತಿರ್ಮಾಣ ಮಾಡಬೇಕೆಂದರು. ಇದರ ಕುರಿತು ಮತ್ತೊಮ್ಮೆ ವಿಧಾನ ಸಭಾಧ್ಯಕ್ಷರ ಜೊತೆಗೆ ಮಾತನಾಡುತ್ತೇನೆ ಎಂದರು.
ಇನ್ನು, ಶಾಲಾ-ಕಾಲೇಜುಗಳ ಶುಲ್ಕ ವಿಚಾರವಾಗಿ ಸರ್ಕಾರ ಎಬಿಸಿಡಿ ಎಂದು ಮಾಡಬೇಕು. ಈ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳು ಕುಂತು ಚರ್ಚೆ ನಡೆಸಿ, ಮಾರ್ಗಸೂಚಿಗಳನ್ನು ಹೊರಡಿಸಿ ಸಮಸ್ಯೆ ಬಗೆಹರಿಸಬೇಕು, ಸರ್ವೆ ಮಾಡಿ ನೊಡಿದ್ದರೆ ಸ್ಥಿತಿವಂತ ನಮ್ಮತವರ ಖಾಸಗಿ ಶಿಕ್ಷ ಸಂಸ್ಥೆಗಳು ಇವೆ, ಹಾಗಾಗಿ ಪೀಸ್ ವಿಚಾರವನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಅಧಿಕಾರಿಗಳಿಂದ ಸಲಹೆ ಪಡೆದು ಪೋಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ತಿಳಿಸಿದರು.