ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಬೇದರಿಸಿ ಹಣ ದೋಚಿದ್ದ ಆರೋಪಿಯನ್ನು ಬಂಧಿಸಿದ ಧಾರವಾಡ ಪೊಲೀಸರು

ಧಾರವಾಡ : ರಸ್ತೆ ಬದಿ ಬಸಗಾಗಿ ಕಾಯುತ್ತಿದ್ದವನನ್ನು ಲಿಫ್ಟ್ ಕೋಡುವ ನೆಪದಲ್ಲಿ ಕರೆದುಕೊಂಡು ಹೋಗಿ, ಹಣ ದೋಚ್ಚಿದ ಬೈಕ ಸವಾರನನ್ನು ಧಾರವಾಡ ವಿದ್ಯಾಗಿರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ತಡಸಿನಕೊಪ್ಪ ನಿವಾಸಿ ಗೋವಿಂದ ಬಂಗಾರಿ (25) ಬಂಧಿತ ಯುವಕನಾಗಿದ್ದಾನೆ. ಇತ ಕಳೆದ 20 ದಿನಗಳ ಅಂದರೆ (ಜೂನ 10) ರಂದು, ಉತ್ತರ ಕನ್ನಡ ಜಿಲ್ಲೆಯ‌ ಮೂಲದ ಪರಮೇಶ್ವರ್ ಅವರ್ಸಾ ಎಂಬುವವರ ತಮ್ಮ ಊರಿಗೆ ತೆರಳಿ ಕಲಘಟಗಿ ರೋಡ್ ಮೇಲೆ ವಾಹನಗಳಿಗಾಗಿ ಕಾಯುತ್ತಿದ್ದರು, ಇದನ್ನು ಎನ್​​ಕ್ಯಾಶ್ ಮಾಡಿಕೊಂಡ, ಬೈಕ್ ಸವಾರ ಗೋವಿಂದ ಬೈಕ್​​​ ಸವಾರ ಪರಮೇಶ್ಬರರನ್ನು ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿ. ಲಿಫ್ಟ್ ಕೋಡುವ ಮೆಪದಲ್ಲಿ ಕರೆದುಕೊಂಡು ಹೋಗಿ, ಯರಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ತೆರಳಿ, ಹಿಂಬದಿ ಸವಾರರನ್ನು ಬೇದರಿಸಿ ಅವರಲ್ಲಿ 5 ಸಾವಿರ ಹಣವನ್ನು ದೋಚ್ಚಿದ್ದನು. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದ ಪರಮೇಶ್ವರ್ ಪ್ರಕರಣ ದಾಖಲಿಸಿದರು.

ಪ್ರಕರಣದ ಬೆನ್ನು ಬಿದ್ದ ವಿದ್ಯಾಗಿರಿ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟವಲ್ಲಿ ಈಗ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 50 ಸಾವಿರ ಬೆಲೆ ಬಾಳುವ ಹಿರೋ ಮೋಟರ ಬೈಕ್, 3500 ರೂಪಾಯಿ ನಗದು, ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button