150 ಬ್ಲಾಕ್ ಫಂಗಸ್ ರೋಗಿಗಳಲ್ಲಿ 120 ಜನರಿಗೆ ಆಪರೇಷನ್; ಕಣ್ಣು ಕಳೆದುಕೊಂಡ ಹಲವರು

ರಾಜ್ಯದಲ್ಲಿ ಕೊರೋನಾ ಮಾಹಾಮಾರಿ ಸೋಂಕಿನ ಅಬ್ಬರ ಕಡಿಯಾಗುತಿದ್ದು, ಆದರೆ ಡೆಲ್ಟಾ ವೈರಸ್ ಭೀತಿಯ ಜೊತೆಗೆ, ಈಗ ಕರಿಮಾರಿ ಕಾಟ ಹೆಚ್ಚುತ್ತಲೇ ಸಾಗುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಪ್ರತಿದಿನ ಆಸ್ಪತ್ರೆಗೆ ದಿನಕ್ಕೆ ಮೂರರಿಂದ ನಾಲ್ಕು ಜನರು ಅಂತರ ಜಿಲ್ಲೆಯ ಬ್ಲ್ಯಾಕ್ ಫಂಗಸ್ ರೋಗಿಗಳು ಅಡ್ಮಿಟ್ ಆಗುತ್ತಿದ್ದಾರೆ, ಇನ್ನೂ ಈ ಕರಿ ಹೆಮ್ಮಾರಿಗೆ ಕಣ್ಣು ಕಳೆದುಕೊಳ್ಳುವವರ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸುತ್ತಿದೆ.
ಕಿಲ್ಲರ್ ಕೊರೋನಾ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿ ವೈರಸ್ ಕಟ್ಟಿಹಾಕಲು ಯಶ್ವಸಿಯಾಗಿದೆ. ಲಾಕ್ ಡೌನ್ ನಂತರ ಪಾಸಿಟಿವಿಟಿ ರೇಟ್ ಏನೋ ಕಡಿಮೆಯಾಗಿದೆ. ಅದರೆ ಕರಿಮಾರಿ ಬ್ಲಾಕ್ ಫಂಗಸ್ ಸೋಂಕು ಹರಡುವುದು ಮಾತ್ರ ಕಡಿಮೆಯಾಗಿಲ್ಲ. ಕಳೆದೆರಡು ತಿಂಗಳಿನಿಂದ ಬ್ಲಾಕ್ ಫಂಗಸ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಲೇ ಸಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಿನೇ ದಿನೇ ಬ್ಲಾಕ್ ಫಂಗಸ್ ಸೊಂಕಿತರು ದಾಖಲಾಗುತ್ತಿದ್ದಾರೆ. ಸದ್ಯ 150 ಸೊಂಕಿತರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಈಗಾಗಲೇ 120ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಸೊಂಕಿತರಿಗೆ ಇಎನ್ ಟಿ ವಿಭಾಗದಿಂದ ಆಪರೇಷನ್ ಮಾಡಲಾಗಿದೆ. ಈ ಫೈಕಿ ಹತ್ತು ಜನರು ಸಂಪೂರ್ಣ ಕಣ್ಣು ಕಳೆದುಕೊಂಡು ಶಾಶ್ವತ ನೇತ್ರ ಹೀನರಾಗಿದ್ದಾರೆ. ಅಲ್ಲದೇ ಕಿಮ್ಸ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಸೊಂಕಿತರು ಸಾವನ್ನಪ್ಪುತ್ತಿರುವ ಸಂಖ್ಯೆ ಸಹ ಹೆಚ್ಚಳವಾಗುತ್ತಿರುವುದು, ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪಾ ಅಂಟರತಾನಿಯವರ ವಿವರಿಸಿದ್ದು, ಬ್ಲ್ಯಾಕ್ ಫಂಗಸ್ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಿದ್ದಾರೆ.
ಬ್ಲಾಕ್ ಫಂಗಸ್ ಸೊಂಕಿನಿಂದ ಕಣ್ಣು, ಕಿವಿ, ಮೆದುಳು ರೋಗದಿಂದ ಹಲವು ಸೊಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದು. ಇನ್ನೂ ಹಲವರು ಬಾಯಿ ದವಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೋವಿಡ್ ಕಡಿಮೆಯಾದರೂ ಕರಿಮಾರಿ ಹೆಮ್ಮಾರಿಯ ಸೊಂಕು ದಿನದಿಂದದಿನಕ್ಕೆ ಹೆಚ್ಚಳವಾಗುತ್ತಿರುವುದು ಜಿಲ್ಲಾಡಳಿತ ಸೇರಿದಂತೆ ಕಿಮ್ಸ್ ಆಸ್ಪತ್ರೆಯ ವೈದ್ಯರ ಆತಂಕಕ್ಕೆ ಕಾರಣವಾಗಿದ್ದು, ಕರಿ ಹೆಮ್ಮಾರಿ ತಡೆಯಲು ಕಿಮ್ಸ್ ವೈದ್ಯರು ಹರಸಾಹಸ ಪಡುತ್ತಿದ್ದರು, ಈ ವೈರಸ್ ಪ್ರಕರಣಗಳ ವರದಿ ಹೆಚ್ಚಾಗುತ್ತುರುವದು ಈಗ ಆತಂಕ ಮೂಡಿಸುತ್ತಿದೆ.