ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವ್ಯಾಕ್ಸಿನ್ಗಾಗಿ ವಿದ್ಯಾರ್ಥಿಗಳ ಗದ್ದಲ

ಧಾರವಾಡ: ಈಗಾಗಲೇ ದೇಶವ್ಯಾಪಿ ಉಚಿತ ಕೊರೊನಾ ಲಸಿಕಾ ಅಭಿಯಾನ ನಡೆಯುತ್ತಿದ್ದು, ಇಂದಿನಿಂದ ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾದ ವ್ಯಾಕ್ಸಿನ್ ಕೇಂದ್ರದಲ್ಲಿ ಸಿಬ್ಬಂದಿ ತಮಗೆ ಬೇಕಾದವರಿಗೆ ವ್ಯಾಕ್ಸಿನ್ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ.
ಧಾರವಾಡ ಜಿಲ್ಲಾಸ್ಪತ್ರೆಯ ವ್ಯಾಕ್ಸಿನ್ ಕೇಂದ್ರದಲ್ಲಿ ಈಗ ಲಸಿಕೆ ಪಡೆದುಕೊಳ್ಳಲು ವಿದ್ಯಾರ್ಥಿಗಳು ಹರಸಾಹಸ ಮಾಡುತ್ತುದ್ದು, ಸರತಿ ಸಾಲಿನಲ್ಲಿ ಮುಂಜಾನೇಯಿಂದಲ್ಲೇ ಪಾಳೆಯಲ್ಲಿ ನಿಂತರು, ನಮ್ಮಗೆ ಲಸಿಕೆ ನೀಡದೆ, ವ್ಯಾಕ್ಸಿನ್ ಕೇಂದ್ರದ ಸಿಬ್ಬಂದಿಗಳು ತಾರ ತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಈ ವಿಚಾರವಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ವ್ಯಾಕ್ಸಿನ್ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಮೀಸಲಿರುವ ಕೇಂದ್ರದಲ್ಲಿ ಬೇರೆಯವರನ್ನು ಯಾಕೆ ಒಳಗೆ ಪ್ರವೇಶ ನೀಡಿ ಲಸಿಕೆ ಹಾಕುತ್ತಿದ್ದಾರೆ. ಎಷ್ಟು ದುಡ್ಡಿಗೆ ವಿದ್ಯಾರ್ಥಿಗಳ ಲಸಿಕೆಯನ್ನು ಮಾರಾಟ ಮಾಡಿದ್ದಿರಾ ಎಂಬೆಲ್ಲ ಪ್ರಶ್ನೆಗಳನ್ನು ಮಾಡಿ ಸಿಬ್ಬಂದಿಯ ವಿರುದ್ಧ ಗರಂ ಆಗಿರುವ ದೃಶ್ಯ ಸ್ಥಳಿಯರ ಮೊಬೈಲ್ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ಸ್ಥಳಿಯವಾಗಿ ಭದ್ರತೆಯಲ್ಲಿದ ಪೊಲೀಸ್ ಸಿಬ್ಬಂದಿಯಬಮವರಿಗೆ ಮನವಿಮಾಡಿ, ಈ ಕೂಡಲೇ ಕೇಂದ್ರದ ಒಳಗೆ ಇರುವ, ವಿದ್ಯಾರ್ಥಿ ಅಲ್ಲದವರನ್ನು ಹೊರಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಬಳಿಕ ಮಧ್ಯ ಪ್ರವೇಶ ಮಾಡಿದ ಪೊಲೀಸರು ವಿದ್ಯಾರ್ಥಿಗಳನ್ನು ಸಮಾಧನ ಪಡಿಸಿ ಈಗ ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.