ಯೋಗಿ ಆದಿತ್ಯನಾಥ ಬದಲಾವಣೆ ಊಹಾಪೋಹ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
24x7liveKannada
Mar 15, 2023 22:38
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯಾನಾಥ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ, ಪ್ರಸ್ತುತ ಉತ್ತರ ಪ್ರದೇಶದಲ್ಲಿ ಗೂಂಡಾಗಿರಿ, ರೌಡಿಸಂ ಮಟ್ಟಾಹಾಕುವಲ್ಲಿ ಯೋಗಿ ಆದಿತ್ಯನಾಥ ಅವರು ಯಶಸ್ವಿಯಾಗಿದ್ದಾರೆ. ಆದರೆ ಈಗ ಅವರ ಸಿಎಂ ಸ್ಥಾನ ಬದಲಾವಣೆಯ ಮಾಡುತ್ತಾರೆ ಎಂಬ ಸುದ್ದಿಗಳು ಬರುತ್ತಿದ್ದು, ಅವೆಲ್ಲವು ನನಗೆ ತಿಳಿದ ಮಟ್ಟಿಗೆ ಊಹಾಪೋಹ ಸುದ್ದಿಗಳಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥವರನ್ನು ಈ ಹಿಂದೆ ಎರಡ ಮೂರು ಟರ್ಮಿಂದ ನಾನು ಅವರನ್ನು ಚೆನ್ನಾಗೆ ಬಲೆ, ಲೋಕಸಭೆಯಲ್ಲಿ ನಮ್ಮ ಮುಂದೆಯೇ ಅವರು ಕುಳಿತುಕೊಳ್ಳುತ್ತಿದ್ದರು, ಆವಾಗಿನಿಂದ ಅವರ ಮತ್ತು ನಮ್ಮ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅಲ್ಲದೆ ಉತ್ತರ ಪ್ರದೇಶ ಸಿಎಂ ಆಗಿ ಯೋಗಿ ಅವರು ಉತ್ತಮ ಕೆಲಸ ಮಾಡಿತ್ತಿದ್ದಾರೆ. ಇದರ ಮಧ್ಯ ಪ್ರಧಾನಿಯವರನ್ನು ಭೇಟಿಯಾದ ತಕ್ಷಣ ಅವರ ಬದಲಾವಣೆ ಎನ್ನುವುದು ಎಷ್ಟು ಸರಿ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದರು.