ಹುಬ್ಬಳ್ಳಿ - ಧಾರವಾಡ

ಯೋಗೇಶ್​ಗೌಡ ಕೊಲೆ ಪ್ರಕರಣ; ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧನ

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಿಗ್ಗೆ ಸಿಬಿಐನಿಂದ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರನ್ನು ಸಿಬಿಐ ಅಧಿಕಾರಿಗಳ ತಂಡ ಬಂಧಿಸಿದೆ.

ಈ ಹಿಂದೆ ವಿನಯ ಕುಲಕರ್ಣಿ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಅಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ಹಿಸಿದ್ದ, ವಿನಯ ಆಪ್ತ ಕಾರ್ಯದರ್ಶಿ ಹಾಗೂ ಕೆ ಎ. ಎಸ್ ಅಧಿಕಾರಿ ಸೋಮು ನ್ಯಾಮಗೌಡರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಗದಗನಿಂದ ಸೋಮು ನ್ಯಾಮಗೌಡರನ್ನು ಬಂಧಿಸಿ, ಈಗ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆತಂದಿದ್ದು, ರಾಕೇಶ ರಂಜನ್ ನೇತೃತ್ವದ ಸಿಬಿಐ ತಂಡ ಈಗ ಸೋಮು‌ನ್ಯಾಮಗೌಡರಮ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕೆಎಎಸ್ ಅಧಿಕಾರಿಯಾಗಿರುವ ಸೋಮು ನ್ಯಾಮಗೌಡರ ಅವರಿಗೆ, ಯೋಗೀಶಗೌಡರ ಹತ್ಯೆಯ ಪೂರ್ವ ಎಲ್ಲ ಮಾಹಿತಿ ಗೊತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಸಿಬಿಐ ಅಧಿಕಾರಿಗಳು ಸೋಮು ನ್ಯಾಮಗೌಡರನ್ನು ಹಲವಾರು ಉಪನಗರ ಠಾಣೆಗೆ ಕರೆಯಿಸಿಕೊಂಡು ವಿಚಾರಣೆಗೊಳಪಡಿಸಿದ್ದರು.

ಯೋಗೀಶಗೌಡ ಹತ್ಯೆಗೂ ಮೊದಲು ಸೋಮು ನ್ಯಾಮಗೌಡರವರು, ಸಚಿಬಮವ ವಿನಯರನ್ನು ದೆಹಲಿಗೆ ಹೋಗಿದ್ದಾರೆ ಎಂಬಂತೆ ಬಿಂಬಿಸಲು, ದೆಹಲಿ ಟೂರ್ ಪ್ಲ್ಯಾನ್ ಆರೇಂಜ್ ಮಾಡಿ, ಫಲೈಟ್ ಟಿಕೆಟ್ ಬುಕ್ ಮಾಡಿದರು, ಆದರೆ ಅಂದು ವಿನಯ ಕುಲಕರ್ಣಿಯವರು ಬೆಂಗಳೂರಿನಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಎರಡು ದಿನ ಮುಂಚಿತವಾಗಿ ವಿನಯ್ ಕುಲಕರ್ಣಿ ನಕಲಿ ಪ್ರವಾಸದ ವೇಳಾ ಪಟ್ಟಿಯನ್ನು ಸೋಮು ಅವರು ತಯಾರಿಸಿದ್ದರು ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಿಬಿಐ ಅಧಿಕಾರಿಗಳ ತಂಡ ಸೋಮು ಅವರನ್ನು ಬಂಧಿಸಿ ಶಾಕ್ ನೀಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button