ಜಿಲ್ಲಾ ಸುದ್ದಿ
ಕಳ್ಳಭಟ್ಟಿ ಅಡ್ಡೆ ಮೇಲೆದಾಳಿ; ಮದ್ಯ ವಶ

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಗ್ರಾಮದ ಮನೆಯಲ್ಲಿ ಶೇಖರಣೆ ಮಾಡಿಟ್ಟಿದ್ದ 240 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ವಿವಿಧ ನಮೂನೆಯ ಒಟ್ಟು 91.980 ಲೀಟರ್ ಮದ್ಯ ವನ್ನ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ
ಜಿಲ್ಲೆಯಲ್ಲಿ ವಾರಾಂತ್ಯದ ಲಾಕ್ ಡೌನ್ ಇರುವುದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಅಪಾರ ಪ್ರಮಾಣದ ಮದ್ಯವನ್ನು ಮನೆಯಲ್ಲಿಯೇ ಶೇಖರಿಸಿ ಇಲ್ಲಿಂದ ಬೇರೆಡೆ ಕೂಡ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ
ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಯಮಕನಮರಡಿ ದಾಳಿ ಮಾಡಲಾಗಿದೆ, ದಾಳಿ ವೇಳೆ ಆರೋಪಿಗಳು ಹುಲ್ಯಾನೂರ್ ಗ್ರಾಮದಿಂದ ತರಲಾದ ಮದ್ಯವನ್ನು ತಂದಿರುವ ಬಗ್ಗೆ ಮಾಹಿತಿ ಲಭಿಸಿದೆ.
ಆರೋಪಿಗಳಾದ ಈರಪ್ಪ ಯಲ್ಲಪ್ಪ ಗೊರವ ಎನ್ನುವನ ಬಂಧನವಾಗಿದ್ದು ಇನ್ನೊಬ್ಬ ಆರೋಪಿ ಪ್ರಕಾಶ ಬಸಪ್ಪಾ ಬರಗಾಲಿ ಪರಾರಿಯಾಗಿದ್ದಾನೆ.