ಜಿಲ್ಲಾ ಸುದ್ದಿ

ಕ್ಷೀರಭಾಗ್ಯ ಯೋಜನೆ ಹಾಲಿನ ಪುಡಿ ಅಕ್ರಮ ಮಾರಾಟ ಕೇಸ್; ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಪತಿ ಸಿಐಡಿ ವಶಕ್ಕೆ

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ ಪತಿ ಶಿವಾನಂದ ಅಂಗಡಿ ಕ್ಷೀರ ಭಾಗ್ಯ ಯೋಜನೆ ಹಾಲಿನ ಅಕ್ರಮದ ಕೇಸ್ ನಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಆಪ್ತ ಶಿವಾನಂದ ಅಂಗಡಿ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಹರಿಹಾಯ್ದಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವೆ ಉಮಾಶ್ರೀ, ಮಕ್ಕಳಿಗೆ ವಿತರಿಸುವ ಹಾಲಿನ ಪುಡಿಯನ್ನು ಅಂತರ್ ರಾಜ್ಯ ಕ್ಕೆ ಮಾರಾಟ ಮಾಡುತ್ತಿದ್ದರು‌. ಅಂತಹವರು ಶಾಸಕ ಸಿದ್ದು ಸವದಿ ಆಪ್ತ ಶಿವಾನಂದ ಅಂಗಡಿ, ಇವರಿಗೆ ನಾಚಿಕೆ ಆಗಬೇಕು. ಮಕ್ಕಳಿಗೆ ವಿತರಿಸುವ ಹಾಲನ್ನೂ ಇವರು ಬಿಡುತ್ತಿಲ್ಲ. ಇವರಿಗೆ ನಾಚಿಕೆ ಆಗಲ್ವಾ, ಇವರಿಗೆ ಮಾನ ಮರ್ಯಾದೆ ಇದ್ಯಾ, ಕ್ಷೀರ ಭಾಗ್ಯ ಯೋಜನೆ ಉದ್ದೇಶವೇನು, ಹಣ ಮಾಡುವಂತದ್ದಾ ಎಂದು ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದಿರುವ ತಾಯಿ ಹೃದಯವಿರುವ ಯೋಜನೆ. ಅಪೌಷ್ಟಿಕತೆಯಿಂದ ನರಳುತ್ತಿದ್ದ ಮಕ್ಕಳಿಗಾಗಿ ತಂದಿದ್ದ ಯೋಜನೆ. ಹಣವಿರುವವರು ಅಕ್ರಮದಲ್ಲಿ ತೊಡಗಿದ್ದಾರೆ, ಜಿಲ್ಲಾಡಳಿತ ಏನು ಮಾಡುತ್ತಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಣ್ಗಾವಲು ಇಲ್ಲ. ಇಂತಹ ಅಕ್ರಮ ತಡೆಯಲು ಜಿಲ್ಲಾ ಪೊಲೀಸ್ ಗೆ ಆಗಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಇದರಲ್ಲಿ ಭಾಗಿಯಾದವರು ಎಂತಹ ರಾಜಕಾರಣಿಯಾಗಿದ್ದರೂ,ಇದರ ‌ಸತ್ಯಾಸತ್ಯತೆ ಹೊರಗೆ ಬರಬೇಕು.ಸಿಐಡಿ ಅಧಿಕಾರಿಗಳು ಯಾವುದೂ ಒತ್ತಡಕ್ಕೆ ಮಣಿಯದೆ ಎಲ್ಲರನ್ನೂ ತನಿಖೆಗೊಳಪಡಿ‌ಸಿ ಅಪರಾಧಿಗಳಿಗೆ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button