ಉತ್ತರ ಕನ್ನಡಜಿಲ್ಲಾ ಸುದ್ದಿ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಆಯ್ಕೆಯಾದ ಕುಮಟಾದ ಎರಡು ವರ್ಷದ ಬಾಲಕಿ

ಕಾರವಾರ : ಕುಮಟಾ ಪಟ್ಟಣದ ಎರಡು ವರ್ಷದ ಪುಟಾಣಿ ಬಾಲಕಿ ದ್ಯುತಿ ವಿನೋದ ರಾವ್‌ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ ಗೆ ಆಯ್ಕೆ ಆಗುವ ಮೂಲಕ
ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ಜಿಲ್ಲೆಯ ಕುಮಟಾ ತಾಲೂಕಿನ ಹೆರವಟ್ಟಾದ ವಿನೋದ ರಾವ್‌ ಮತ್ತು ರಂಜನಾ ದಂಪತಿ ಮಗಳಾದ ದ್ಯುತಿ ವಿನೋದ ರಾವ್‌ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ.

35 ಪ್ರಾಣಿಗಳು, 15 ಪಕ್ಷಿಗಳು, 12 ರೀತಿಯ ಬಣ್ಣಗಳು, 30 ರೀತಿಯ ತಿಂಡಿಗಳು,23 ತರಕಾರಿಗಳು, 20 ರೀತಿಯ ಹಣ್ಣುಗಳು, 17 ರೀತಿಯ ಹೂಗಳು, 16 ವಾಹನಗಳು, 12 ರೀತಿಯ ಆಕೃತಿಗಳು, 70 ಜನ ರಾಜಕಾರಣಿಗಳು, 13 ಜನ ಸ್ವಾತಂತ್ರ ಹೋರಾಟಗಾರರು, 18 ಜಾತಿಯ ಕೀಟಗಳು, 15 ಜನ ಕ್ರಿಕೇಟರ್‌ ಗಳು, 35 ಜನ ಸೆಲಬ್ರೆಟಿಗಳು, 8 ಜನ ಮಹಿಳಾ ಸಾಧಕರು, 29 ರಾಜ್ಯಗಳು, 20 ಜಾತಿಯ ನಾಯಿಗಳು, 1 ರಿಂದ 20 ರವರೆಗಿನ ಹಿಂದಿ ಸಂಖ್ಯೆಗಳು, 1 ರಿಂದ10 ರ ವರೆಗಿನ ಆಂಗ್ಲ ಸಂಖ್ಯೆಗಳು, 1 ರಿಂದ 10 ರ ವರೆಗಿನ ಕನ್ನಡ ಸಂಖ್ಯೆಗಳು, ABCD, A ಯಿಂದ Z ವರೆಗೆ, ಎರಡೂ ಇಂಗ್ಲೀಷ್‌ ರೈಮ್ಸ್‌, 2 ಭಗವದ್ಗೀತೆಯ ಶ್ಲೋಕಗಳು, 12 ತಿಂಗಳುಗಳು, ವಾರದ 7 ದಿನಗಳು ಹಾಗೂ ವಿವಿಧ ಅಂತರಾಷ್ಟ್ರೀಯ 280 ಕ್ಕೂ ಹೆಚ್ಚಿನ ಕಂಪನಿಗಳ ಲೋಗೋಗಳನ್ನು ಗುರುತಿಸುತ್ತಾಳೆ.

ದ್ಯುತಿ ವಿನೋದ ರಾವ್‌ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಇಂಡಿಯಾ ಬುಕ್‌ ಅಫ್‌ ರೆಕಾರ್ಡ್ಸ್‌ ನಲ್ಲಿ ಸ್ಥಾನ ಪಡೆದಿದ್ದಾಳೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಗಮನಿಸಿ ಈ ಸಂಸ್ಥೆ ಪ್ರಶಸ್ತಿ ನೀಡಿದೆ.

ಒಟ್ಟಾರೆ ಪುಟ್ಟ ವಯಸ್ಸಿನಲ್ಲಿಯೇ ಇಷ್ಟೊಂದು ನೆನಪಿನ ಶಕ್ತಿ ಇರುವುದು ನಿಜಕ್ಕೂ ಹೆಮ್ಮೆಯ ವಿಚಾರ. ದ್ಯುತಿ ವಿನೋದ ರಾವ್‌ ಮುಂದಿನ ದಿನಗಳಲ್ಲಿ ಇನ್ನಷ್ಟು ನೂತನ ಸಾಧನೆಗಳನ್ನು ಮಾಡಲಿ, ಆ ಮೂಲಕ ದೇಶಕ್ಕೆ ಉತ್ತಮ ಹೆಸರು ತಂದುಕೊಡಲಿ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button