ಜಿಲ್ಲಾ ಸುದ್ದಿ

ವಿಶೇಷ ಪ್ಯಾಕೇಜ್ ನೀಡಲು ಬಿಸಿಯೂಟ ತಯಾರಕರ ಒತ್ತಾಯ 

ಕಾರವಾರ : ಕೊರೋನಾ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಅತಂತ್ರ ಜೀವನ ನಡೆಸುತ್ತಿರುವ ವಿವಿಧ ವೃತ್ತಿಯವರಿಗೆ ಸರಕಾರ ಎರಡು ಬಾರಿ ವಿಶೇಷ ಪ್ಯಾಕೇಜ್ ಘೋಷಿಸಿದೆ.

ಆದರೆ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಅಕ್ಷರ ದಾಸೋಹದ ಕಾರ್ಯಕರ್ತರನ್ನು ವಿಶೇಷ ಪ್ಯಾಕೇಜಿನಡಿ ಕೈ ಬಿಟ್ಟಿರುವ ಬಗ್ಗೆ ಅಕ್ಷರ ದಾಸೋಹ ಕಾರ್ಯಕರ್ತರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ ವಿಶೇಷ ಪ್ಯಾಕೇಜ್‌ನಡಿ ತಮಗೂ ನೆರವು ನೀಡುವ ಮೂಲಕ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದೆ. ಈ ಕುರಿತು ಮಾಧ್ಯಮದವ ರೊಂದಿಗೆ ಮಾತನಾಡಿದ ಅಕ್ಷರ ದಾಸೋಹ ಸಂಘದ ಉಪಾಧ್ಯಕ್ಷೆ ಯಶೋದಾ ಅವರು,ಜಿಲ್ಲೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ,ಪ್ರೌಢಶಾಲೆ, ಅನುಧಾನಿತ ಶಾಲೆ ಸೇರಿದಂತೆ 485 ಶಾಲೆಗಳು ಕಾರ್ಯಚರಿಸುತ್ತಿದ್ದು,ಅದರಲ್ಲಿ 900 ಮಂದಿ ಅಕ್ಷರ ದಾಸೋಹ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ.ಇವರಿಗೆ ಸರಕಾರ ಪ್ರತಿ ತಿಂಗಳು ವೇತನವಾಗಿ 2,700 ಹಾಗೂ ಸಹಾಯಕಿಯರಿಗೆ 2600 ರೂ.ಗಳಂತೆ 10 ತಿಂಗಳ ವೇತನವನ್ನು ನೀಡಲಾಗಿದೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ನಮಗೆ ಕೇವಲ 10 ತಿಂಗಳ ಸಂಬಳವನ್ನು ಮಾತ್ರ ನೀಡಲಾಗಿದ್ದು,ಕಳೆದ ವರ್ಷ ಹಾಗೂ ಈ ವರ್ಷವೂ ವಿಶೇಷ ಪ್ಯಾಕೇಜ್‌ನಡಿ ಕೈಬಿಟ್ಟು ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಪ್ರವೃತ್ತಿಯನ್ನು ಅನುಸರಿಸಿದೆ ಎಂದು ಯಶೋದಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಕಾರ ನೀಡುವ ಅಲ್ಪ ಸಂಬಳದಲ್ಲೂ ಅಕ್ಷರ ದಾಸೋಹ ಕಾರ್ಯಕರ್ತರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ.ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಿ ನೀಡಿದ ನಂತರ ಮನೆಗೆ ಬಂದು ಬೇರೆ ಕೆಲಸ ನಿರ್ವಹಿಸುವ ಅವಕಾಶವೂ ನಮಗಿರುವುದಿಲ್ಲ.ಇಂದಿನ ಸಂದಿಗ್ಧ ಪರಿಸ್ಥಿತಿಯನ್ನು ಮನಗಂಡು ಸರಕಾರ ಅಕ್ಷರ ದಾಸೋಹ ಕಾರ್ಯಕರ್ತೆಯ ರಿಗೂ ಪ್ಯಾಕೇಜ್ ನೀಡಬೇಕೆಂದು ಮಕ್ಕಳ ಪೋಷಕಿ ಮಮತಾ ಅವರು ಆಗ್ರಹಿಸಿದ್ದಾರೆ.

ಅತಿ ಕನಿಷ್ಠ ವೇತನದಲ್ಲಿ ನಾವು ಸೇವೆ ಸಲ್ಲಿಸುತ್ತಿದ್ದೇವೆ.ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2 ಘಂಟೆಗಿoತಲೂ ಹೆಚ್ಚುಕಾಲ ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾಗಿದೆ.ಸರಕಾರ ನಮ್ಮ ಸೇವೆಯನ್ನು ಪರಿಗಣಿಸಿ ನೀಡುವ ವೇತನವನ್ನು ಹಾಗೂ ಸರಕಾರದ ಸವಲತ್ತುಗಳನ್ನು ಹೆಚ್ಚು ಗೊಳಿಸಬೇಕು.ನಮಗೂ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪೋಷಕಿ ವಾಣಿ ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button