ಉಡುಪಿಜಿಲ್ಲಾ ಸುದ್ದಿ
ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ರಚನೆ

ಉಡುಪಿ: ನಾಟಕ ಕಲಾವಿದರಿಗೆ ಸಮಸ್ಯೆಗಳಾದಾಗ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಕಲಾವಿದರು ತೊಡಗಿಕೊಳ್ಳುವ ನಿಟ್ಟಿನಲ್ಲಿ ಉಡುಪಿಯಲ್ಲಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ರಚಿಸಲಾಗಿದೆ.
ಇದುವರೆಗೆ ಕಲಾವಿದರು ತಮ್ಮನ್ನು ಕೇಳುವವರಿಲ್ಲ ಅನ್ನುವ ಭಾವನೆ ತೊಡೆದು ನಮಗೂ ಒಂದು ಸಂಘಟನೆ ಇದೆ ಎಂಬುದನ್ನು ಎದೆತಟ್ಟಿ ಹೇಳುವಂತಾಗಿದೆ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದೇಯಿಬೈದೆತಿ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಹೇಳಿದರು.
ಒಕ್ಕೂಟದ ಅಧ್ಯಕ್ಷ ಲೀಲಾಧರ ಶೆಟ್ಟಿ ,ರಂಗಕರ್ಮಿ ಕೆ ಕೆ ಸಾಲಿಯಾನ್ , ಗೋಪಿನಾಥ್ ಭಟ್ ಹಳೆಯಂಗಡಿ, ಸಿನಿಮಾ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ , ಪ್ರಭಾಕರ ಕಲ್ಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.