ಕೊರೊನಾ ಮೂರನೇ ಅಲೆ: ಕಲಬುರಗಿಯ ಅಪೌಷ್ಟಿಕ ಮಕ್ಕಳ ಪೋಷಕರಲ್ಲಿ ಹೆಚ್ಚಿದ ಆತಂಕ

ವರದಿ: ವೀರೇಶ ಚಿನಗುಡಿ
ಕಲಬುರಗಿ: ಜಿಲ್ಲೆಯಲ್ಲಿ 28 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಕೊರೊನಾ ಮೂರನೇ ಅಲೆ ಸಾಧ್ಯತೆಯ ಹಿನ್ನೆಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರಲ್ಲಿ ಭಯ ಶುರುವಾಗಿದೆ.
ಇನ್ನೆಡರು ತಿಂಗಳಲ್ಲಿ ಮೂರನೇ ಅಲೆ ಲಗ್ಗೆಯಿಡುವ ಸಂಭವ ಇದೆ. ಮೂರನೇ ಅಲೆ ಮಕ್ಕಳಿಗೆ ಮಾರಕವಿದೆ ಎನ್ನುವ ಅಂಶ ಈಗಾಗಲೇ ಬಯಲಾಗಿದೆ. ಅದರಲ್ಲೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೂರನೇ ಅಲೆ ಮಾರಕವಾಗುತ್ತಾ ಅನ್ನೋ ಆತಂಕ ಹಬ್ಬುತ್ತಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಮಾಹಿತಿ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ 2,23,241 ಮಕ್ಕಳ ನೋಂದಣಿ ಇದ್ದು, ಅದರಲ್ಲಿ ಬರೋಬ್ಬರಿ 28,786 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 632 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳೆ ಕೊರೊನಾ ಮೂರನೇ ಅಲೆಗೆ ಮೇನ್ ಟಾರ್ಗೆಟ್ ಆಗೋ ಸಾದ್ಯತೆ ಹಿನ್ನೆಲೆ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಮೇಲೆ ನಿಗಾ ವಹಿಸಲಾಗ್ತಿದೆ.
ಜಿಲ್ಲೆಯಲ್ಲಿ ಹೆಚ್ಚುವರಿ ಅಪೌಷ್ಟಿಕ ನಿರ್ಮೂಲನಾ ಕೇಂದ್ರಗಳನ್ನು ತೆರೆಯಲು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಕೊರೊನಾ 3ನೇ ಅಲೆಯನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತ ಕೂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿಕಿತ್ಸೆಗಾಗಿ ಮಕ್ಕಳ ಸೈಜ್ ಮಾಸ್ಕ್, ಆಕ್ಸಿಜನ್ ಮಾಸ್ಕ್, ವೆಂಟಿಲೇಟರ್, ಐಸಿಯು ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ವಿವಿ ಜೋತ್ಸ್ನಾ ತಿಳಿಸಿದ್ದಾರೆ.
ಮಕ್ಕಳ ತಜ್ಞ ವೈದ್ಯರು ಹಾಗೂ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಜಿಲ್ಲಾಧಿಕಾರಿಗಳು ಮೂರನೇ ಅಲೆಯಿಂದ ಮಕ್ಕಳನ್ನ ರಕ್ಷಿಸಲು ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗುತ್ತಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕು ಮೂರನೇ ಅಲೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ರು ಅಧಿಕಾರಿಗಳು ಯಾವುದೇ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಪಿಡಿಎಟ್ರೀಕ್ ವೈದ್ಯರ, ಮಕ್ಕಳ ಚಿಕಿತ್ಸೆ ನೀಡುವ ಸ್ಟಾಫ್ ನರ್ಸ್ ಗಳ ಕೊರತೆ ಇದೆ. ಹೀಗಿರುವಾಗ ಒಂದೆ ವೇಳೆ ಮೂರನೇ ಅಲೆ ಬಂದ್ರೆ ಯಾವ ರೀತಿ ನಿಭಾಯಿಸುತ್ತಾರೆ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದ್ದಾರೆ.
ಪೋಷಕರಲ್ಲಿ ಭೀತಿ ಶುರುವಾಗಿರುವ ಹಿನ್ನೆಲೆಯಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯದ ಮೇಲೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕಿದೆ. ಮೂರನೇ ಅಲೆ ಏಂಟ್ರಿ ಕೊಟ್ರೆ ಮಕ್ಕಳನ್ನ ಸಂರಕ್ಷಿಸುವ ಜವಾಬ್ದಾರಿ ಪೋಷಕರು ಮತ್ತು ಜಿಲ್ಲಾಡಳಿತದ ಮೇಲಿದೆ.