ಕಲಬುರ್ಗಿ

ಕಲಬುರ್ಗಿಯಲ್ಲಿ ಅಪರಾಧ ತಡೆಗೆ ಪೆಟ್ರೋಲಿಂಗ್, ಪೊಲೀಸ್ ಬೀಟ್‌ ಹೆಚ್ಚಳ

ಕಲಬುರ್ಗಿ: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೆಟ್ರೋಲಿಂಗ್ ಹಾಗೂ ಬೀಟ್‌ ವ್ಯವಸ್ಥೆ ಹೆಚ್ಚಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಆಯುಕ್ತರು, ಕಮಿಷನರ್ ಆಗಿ ಬಂದ ಮೇಲೆ ಕ್ರೈಮ್, ಟ್ರಾಫೀಕ್ ಸೇರಿ ಎಲ್ಲಾ ವಿಭಾಗಗಳಿಗೆ ಒತ್ತು ನೀಡಿದ್ದಾಗಿ ಹೇಳಿದರು. ಕೊರೊನಾ ಸಂದರ್ಭದಲ್ಲಿ ಗಸ್ತಿಗೆ ಹಿನ್ನಡೆಯಾಗಿದ್ದು, ಕೆಳ ಹಂತದ ಅಧಿಕಾರಿಗಳು ಮಾತ್ರ ಗಸ್ತು ಇರುತ್ತಿದ್ದರು. ಆದ್ರಿಗ ಸಮಗ್ರವಾಗಿ ಪರಿಶೀಲಿಸಿ, ಪೆಟ್ರೋಲಿಂಗ್ ಬೀಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಸಿಪಿ ನೇತೃತ್ವದಲ್ಲಿ ಮೂರು ಜನ ಇನ್ಸಪೇಕ್ಟರ್ ಗಳ ಸಹಾಯದಲ್ಲಿ ಗಸ್ತು ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಕೊಲೆ, ಸುಲಿಗೆ, ಕಳ್ಳತನ ತಡೆಯಲು ಸಹಾಯವಾಗಲಿದೆ ಎಂದರು.

ಸದ್ಯ ಲಾಕ್‌ಡೌನ್ ಮುಗಿದಿದ್ದು, ಸಮಾಜ‌ಘಾತುಕ ಶಕ್ತಿಗಳು ಮತ್ತೆ ಮರುಜೀವ ಪಡೆದಿವೆ. ಇವುಗಳಿಗೆ ಕಡಿವಾಣ ಹಾಕಲು ಹದ್ದಿನ ಕಣ್ಣು ಇಡಲಾಗಿದೆ. ಮಾರಕಾಸ್ತ್ರ ತಯಾರಿ, ಮಾರಾಟ, ಸಂಗ್ರಹ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ನಗರದಲ್ಲಿ ಜನಸಂಖ್ಯೆ ಅನುಗುಣವಾಗಿ 5 ಸಾವಿರ ಸಿಸಿಟಿವಿ ಕ್ಯಾಮರಾ ಇರಬೇಕಾಗಿತ್ತು ಈಗ ಕೇವಲ 1 ಸಾವಿರ ಮಾತ್ರ ಇವೆ. ಸಿಸಿಟಿವಿ ಕ್ಯಾಮರಾ ಅಳುವಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗುವಂತೆ ಆಯುಕ್ತರು ಮನವಿ ಮಾಡಿದರು. ಸಿಗ್ನಲ್ ವಿಷಯವಾಗಿ ಈಗಾಗಲೇ ಪಾಲಿಕೆ ಆಯುಕ್ತರ ಜೊತೆ ಚರ್ಚೆ ಮಾಡಲಾಗಿದೆ. ವೃತ್ತಗಳನ್ನು ಅಭಿವದ್ಧಿ ಪಡಿಸುವ ವೇಳೆ ಹೊಸ ಸಿಗ್ನಲ್ ಗಳನ್ನು ಅಳುವಡಿಸಲಾಗುವದು ಎಂದು ಆಯುಕ್ತರು ತಿಳಿಸಿದರು..

Spread the love

Related Articles

Leave a Reply

Your email address will not be published. Required fields are marked *

Back to top button