ಕಲಬುರ್ಗಿ
ಮಾತನಾಡುವ ಮುನ್ನ ಎಚ್ಚರಿಕೆ ಇರಬೇಕು; ಸ್ವಪಕ್ಷದ ಶಾಸಕ ಜಮೀರ್ಗೆ ಪ್ರಿಯಾಂಕ್ ಖರ್ಗೆ ಚಾಟಿ

ಕಲಬುರಗಿ: ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಬಾಯಿ ಹರಿಬಿಡುವುದಿಲ್ಲ ಎಂದು ಸ್ವಪಕ್ಷದ ಶಾಸಕ ಜಮೀರ್ ಅಹ್ಮದ್ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಚಾಟಿ ಬಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಜಮೀರ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಷ್ಟೆ. ಜವಾಬ್ದಾರಿ ಇರುವ ನಾಯಕರು ಮತ್ತು ನಾಲಿಗೆ ಮೇಲೆ ಹಿಡಿತ ಇರೋರು ಈ ರೀತಿ ಮಾತನಾಡೋದಿಲ್ಲ. ಇದರಿಂದ ಮುಂದಿನ ಬಾರಿ ಅಧಿಕಾರ ಹಿಡಿಯುವ ಪಕ್ಷದ ಗುರಿಗೆ ಹಿನ್ನಡೆಯಾಗುತ್ತದೆ. ನಮ್ಮ ಮಾತಿನಿಂದ ಸಮಾಜ ಹಾಗೂ ಪಕ್ಷಕ್ಕೆ ಮೇಲೆ ಬೀಳುವ ಪರಿಣಾಮಗಳ ಬಗ್ಗೆ ಅರಿತುಕೊಂಡು ಮಾತನಾಡಬೇಕು ಎಂದು ಜಮೀರ್ ಅವರಿಗೆ ಟಾಂಗ್ ನೀಡಿದರು.
ಅನಗತ್ಯವಾಗಿ ಯಾರೂ ಬಹಿರಂಗವಾಗಿ ಸಿಎಂ ಹುದ್ದೆ ವಿಚಾರವಾಗಿ ಚರ್ಚೆ ಮಾಡದಂತೆ ಸೂಚಿಸಲಾಗಿದೆ. ಮಾತನಾಡಿದವರ ವಿರುದ್ದ ಶಿಸ್ತು ಸಮಿತಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.