ಜಿಲ್ಲಾ ಸುದ್ದಿ
ಕಂಗನಾ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ

ಬಾಲಿವುಡ್ ನಟಿ ಕಂಗನಾ ರನೌತ್ ಬಾಡಿಗಾರ್ಡ್ ಆಗಿ ಕೆಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲೀಸ್ ಠಾಣೆಯ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಕುಮಾರ್ ಹೆಗ್ಡೆ ಈ ಮುಂಬೈ ಪೋಲೀಸರ ಅತಿಥಿಯಾಗಿದ್ದಾನೆ.
ಮುಂಬೈನಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿಸುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟು ಮುದುವೆಯಾಗಲು ಸಜ್ಜಾಗಿದ್ದ. ಇದು ಮುಂಬೈ ಮಾದ್ಯಮದಲ್ಲಿ ದೊಡ್ಡ ಸದ್ದೇ ಆಗಿತ್ತು. ಆದ್ರೆ ಕುಮಾರ್ ಸುಮಾರು ಒಂದು ತಿಂಗಳಿಂದ ತಮ್ಮ ಗ್ರಾಮವಾದ ಹೆಗ್ಗಡಹಳ್ಳಿ ಗ್ರಾಮದಲ್ಲಿ ತಲೆ ಮರೆಸಿಕೊಂಡು ಮೊತ್ತೊಂದು ಮದುವೆಗೆ ಸಜ್ಜಾಗುತ್ತಿದ್ದ. ಇಂದು ಮುಂಬೈನ ಅಂಧೇರಿ ಪೋಲೀಸರು ಕಿಕ್ಕೇರಿ ಪೋಲೀಸರ ಸಹಕಾರದೊಂದಿಗೆ ಈತನನ್ನು ವಶಕ್ಕೆ ಪಡೆದಿದ್ದು ಮುಂಬೈಗೆ ಕೊಂಡೊಯ್ದಿದ್ದಾರೆ..