ಜುಲೈ 5ರವರೆಗೆ ಕೊಡಗು ಲಾಕ್; ಪ್ರವಾಸಿಗರಿಗೆ ಆಶ್ರಯ ನೀಡಿದರೆ ಕ್ರಮದ ಎಚ್ಚರಿಕೆ

ಕೊಡಗು: ಜುಲೈ 5ರವರೆಗೆ ಲಾಕ್ ಡೌನ್ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ಇಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿದೇ೯ಶಕರು ಹಾಗೂ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ತಿಳಿಸಿದರು.
ಲಾಕ್ ಡೌನ್ ದಿನಗಳಲ್ಲಿಯೂ ಪ್ರವಾಸಿಗರು ಜಿಲ್ಲೆಗೆ ಬರುತ್ತಿರುವ ದೂರುಗಳು ಬಂದಿದೆ. ಜುಲೈ 5 ನವರೆಗೆ ಲಾಕ್ ಡೌನ್ ಜಿಲ್ಲೆಯಲ್ಲಿ ಇರುತ್ತದೆ. ಲಾಕ್ ಡೌನ್ ಮುಗಿಯುವವರೆಗೆ ಕೊಡಗಿನಲ್ಲಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿನ ಹೋಂಸ್ಟೇ, ರೆಸಾಟ್೯, ಲಾಡ್ಜ್ ಗಳಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿದ ದೂರುಗಳು ಇದ್ದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077 ಗೆ ಕರೆ ಮಾಡಲು ಸೂಚಿಸಿದರು.
ಪ್ರವಾಸೋದ್ಯಮ, ಪೊಲೀಸ್, ಕಂದಾಯ ಇಲಾಖೆಗಳ ಕಾಯ೯ಪಡೆ ರಚಿಸಿದ್ದೇವೆ. ಈ ಕಾರ್ಯ ಪಡೆಗಳು ಸಮಪ೯ಕವಾಗಿ ಕಾಯ೯ನಿವ೯ಹಿಸುತ್ತಿದೆ. ಈಗಾಗಲೇ 3 ಹೋಂಸ್ಟೇ ಮೇಲೆ ಧಾಳಿ ಮಾಡಿ ಎಫ್ ಐ ಆರ್ ದಾಖಲಿಸಿದ್ದೇವೆ. 1 ರೆಸಾಟ್೯ ಮೇಲೂ ದೂರು ಬಂದಿದೆ, ಪರಿಶೀಲಿಸುತ್ತೇವೆ ಎಂದರು.
ಇಂದು ಕೂಡ ಪ್ರವಾಸಿಗರಿಗೆ ಅವಕಾಶ ನೀಡಿದ ಮಡಿಕೇರಿಯ ಹೋಂಸ್ಟೇ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಹೊರಜಿಲ್ಲೆಯಿಂದ ಪ್ರವಾಸಿಗರ ಎಂಟ್ರಿಗೆ ಕೊಡಗು ಜಿಲ್ಲೆಯಲ್ಲಿ ಅವಕಾಶ ಇಲ್ಲ ಎಂದು ಈಶ್ವರ ಕುಮಾರ್ ಖಂಡು ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಪ್ರವಾಸಿಗರ ಮೇಲೆ ನಿಗಾ ಇಡಲು ಕಾಯ೯ಪಡೆ ಸನ್ನದ್ದವಾಗಿದೆ. ಹೊರಜಿಲ್ಲೆಗಳಿಂದ ಜಿಲ್ಲೆಗೆ ಪ್ರವಾಸಿಗರ ಎಂಟ್ರಿ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪ್ರವಾಸಿಗರಿಗೆ ಲಾಕ್ ಡೌನ್ ಸಮಯದಲ್ಲಿ ಆಶ್ರಯ ನೀಡಿದಲ್ಲಿ ಆಶ್ರಯ ನೀಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಎಷ್ಟು ದಿನಗಳ ಕಾಲ ನಿಭ೯ಂಧ ಹೇರಬೇಕು, ಯಾವಾಗ ಅವಕಾಶ ನೀಡಬೇಕೆಂದು ರಾಜ್ಯ ಸಕಾ೯ರವೇ ನಿದೇ೯ಶನ ನೀಡುತ್ತದೆ.
ಎಂದು ಈಶ್ವರ ಕುಮಾರ್ ಖಂಡು ಸುದ್ದಿಫೋಷ್ಠಿಯಲ್ಲಿ ತಿಳಿಸಿದರು.