ಕೋಲಾರ
ಎಟಿಎಂನಿಂದ ಹಣ ದರೋಡೆ

ಕೋಲಾರ: ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ನಲ್ಲಿದ್ದ ಹಣ ದೋಚಿ ಪರಾರಿಯಾದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಜಾಲಪ್ಪ ಆಸ್ಪತ್ರೆಯ ಬಳಿಯ ಎಟಿಎಂನಿಂದ ಸುಮಾರು 10 ಲಕ್ಷ ಹಣ ದೋಚಿ ಪರಾರಿ ಆಗಿದ್ದು, ಆತುರದಲ್ಲಿ ಕಳ್ಳರು ಎಟಿಎಂ ನಲ್ಲೇ ಗ್ಯಾಸ್ ಕಟ್ಟರ್ ಬಿಟ್ಟು ಪರಾರಿ ಆಗಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿರೋ ಪೊಲೀಸರು ಸಿಸಿ ಟಿವಿಯನ್ನು ಪರಿಶೀಲನೆಯಲ್ಲಿ ತೊಡಗಿದ್ದು, ಬೆರಳಚ್ಚು ತಂಡವರು ಭೇಟಿದೆ. ಘಟನೆ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.