ಕೋಲಾರ

ಕಳ್ಳತನವಾಗಿದ್ದ 15 ದ್ವಿಚಕ್ರ ವಾಹನಗಳ ಸಮೇತ ಆರೋಪಿಗಳ ಬಂಧನ

ಕೋಲಾರ: ಕೋಲಾರ, ಮಾಲೂರು, ಬೆಂಗಳೂರು ಸೇರಿದಂತೆ ವಿವಿದ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕೋಲಾರ ತಾಲ್ಲೂಕಿನ ವೇಮಗಲ್ ಪೊಲೀಸರು ಬಂಧಿಸಿದ್ದಾರೆ… ಬಂಧಿತರಿಂದ ಸುಮಾರು 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ನಾರಾಯಣಸ್ವಾಮಿ ಮತ್ತು ಆಡೀಷನ್ ಎಸ್.ಪಿ ಗಿರೀ ರವರ ನೇತೃತ್ವದಲ್ಲಿ ವೇಮಗಲ್ ಇನ್ಸಪೆಕ್ಟರ್ ಶಿವರಾಜ್, ಹಾಗೂ ಸಬ್ ಇನ್ಸ್ ಪೆಕ್ಟರ್ ಆಂಜಿನಪ್ಪ ರವರ ತಂಡದ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ತಮಿಲುನಾಡು ಮೂಲದ ಕೃಷ್ಣಗಿರಿ ಜಿಲ್ಲೆಯ ತೊರಹಳ್ಳಿ ಗ್ರಾಮದ ರಾಮು ಆಲಿಯಾಸ್ ರಾಮನ್( 35) ಹಾಗೂ ಅದೇ ಗ್ರಾಮದ ನಾರಾಯಣಸ್ವಾಮಿ ( 38) ಎಂದು ಗುರ್ತಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button