ಜಿಲ್ಲಾ ಸುದ್ದಿ
ಕೆಎಸ್ಆರ್ಟಿಸಿ ಕರ್ನಾಟಕದ ಕೈತಪ್ಪಿಲ್ಲ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ

ಕೆಎಸ್ಆರ್ಟಿಸಿ ಹೆಸರು ಕರ್ನಾಟಕದಿಂದ ಕೈತಪ್ಪಿ ಕೇರಳ ನಿಗಮಕ್ಕೆ ಹೋಗಿದೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಕರ್ನಾಟಕ ಸರ್ಕಾರ ಇದಕ್ಕೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಅದೇ ಹೆಸರನ್ನು ಉಳಿಸಿಕೊಳ್ಳಲಿದೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಫೇಸ್ಬುಕ್ನಲ್ಲಿ ಹೇಳಿಕೊಂಡಿದ್ದಾರೆ.
ಕೇಂದ್ರದ ಟ್ರೇಡ್ಮಾರ್ಕ್ ರಿಜಿಸ್ಟ್ರಿಯವರು ತೀರ್ಪು ಪ್ರಕಟಿಸಿ ಎರಡು ರಾಜ್ಯಗಳ ನಡುವಿನ ದಶಕಗಳ ಕಾನೂನಾತ್ಮಕ ಹೋರಾಟ ಅಂತ್ಯಗೊಂಡಿದೆ ಎಂಬ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ದೃಢಪಟ್ಟಿದೆ. ಟ್ರೇಡ್ಮಾರ್ಕ್ ರಿಜಿಸ್ಟ್ರಿಯವರಿಂದ ಯಾವುದೇ ಸೂಚನೆ ಅಥವಾ ಆದೇಶ ಇದುವರೆಗೂ ಬಂದಿಲ್ಲ. ಇನ್ನೂ ಅಂತಿಮ ಆದೇಶ ಹೊರಬಿದ್ದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.