ಜಿಲ್ಲಾ ಸುದ್ದಿ
ಕಾಪುವಿನಲ್ಲಿ ಬೋನಿಗೆ ಬಿದ್ದ ಚಿರತೆ

ಉಡುಪಿ: ಕಾಪು ತಾಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸುತ್ತಿದ್ದ ಚಿರತೆಯೊಂದು ರವಿವಾರ ತಡರಾತ್ರಿ ಬೋನಿಗೆ ಬಿದ್ದಿದೆ.
ಕಾಪು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಕುರಾಲು ಬಳಿ ಚಿರತೆ ಜನರಿಗೆ ಕಾಟ ನೀಡುತ್ತಿತ್ತು. ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಬೋನು ಇರಿಸಿತ್ತು. ನಿನ್ನೆ ರಾತ್ರಿ ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಬೋನಿಗೆ ಬೀಳುವ ಮೂಲಕ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕಾರ್ಯಾಚರಣೆಯಲ್ಲಿ ಡಿವೈ.ಅರ್.ಎಫ್.ಒ ಜೀವನ್ ದಾಸ್ ಶೆಟ್ಟಿ,ಡಿವೈ.ಅರ್.ಎಫ್.ಒ ಗುರುಪ್ರಸಾದ್,ಫಾರೆಸ್ಟ್ ಗಾರ್ಡ್ ಎಚ್ ಜಯರಾಮ ಶೆಟ್ಟಿ ಮತ್ತಿತರು ಭಾಗಿಯಾಗಿದ್ದರು.