ಜಿಲ್ಲಾ ಸುದ್ದಿ

ಶಿರಸಿ ಸುಗಾವಿ ವಿದ್ಯುತ್ ಸಂಪರ್ಕ ನಿರಂತರ ಕಡಿತ

ಕಾರವಾರ : ಶಿರಸಿ ತಾಲೂಕಿನಿಂದ ಸಂಪರ್ಕ ಹೊಂದಿರುವ ಸುಗಾವಿ ಮತ್ತು ಇತರ ಹಳ್ಳಿಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದೆ
ಎಂದು ಅಲ್ಲಿನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾರದಲ್ಲಿ ಕನಿಷ್ಠ ೨-೩ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ರಾತ್ರಿ ಕಳ್ಳತನದ ಭಯ ಉಂಟಾಗಿದೆ ಎಂದು ಸ್ಥಳೀಯರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಈಗ ಕೊರೋನ ಸೋಂಕು ಎಲ್ಲ ಹಳ್ಳಿಗಳಲ್ಲಿ ಹೆಚ್ಚಾಗಿರುವುದರಿಂದ ಸೋಂಕಿತರು ವಿದ್ಯುತ್ ಇಲ್ಲದೇ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ.

ದಿನಪೂರ್ತಿ ಲೆಕ್ಕವಿಲ್ಲದಷ್ಟು ಸಲ ವಿದ್ಯುತ್ ಸಂಪರ್ಕ ಕಡಿತ ಆಗಿಯೂ ಸಹ ರಾತ್ರಿ ಮತ್ತೆ ಯಾಕೆ ಸಂಪರ್ಕ ಕಡಿತವಾಗುತ್ತದೆ ಎನ್ನುವ ಪ್ರಶ್ನೆಗೆ ಅಲ್ಲಿನ ಸೆಕ್ಷನ್ ಆಫೀಸರ್ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಗಣೇಶ ಹೆಗಡೆ ಮಾಹಿತಿ ನೀಡಿದ್ದಾರೆ.

ಮಳೆಗಾಲ ಶುರುವಾಗುವ ಮುಂಚಿತವೇ ಈ ಪರಿಸ್ಥಿತಿ ಆದರೆ ಇನ್ನು ಮಳೆಗಾಲದಲ್ಲಿ ಹೇಗೆ ಎಂದು ಸ್ಥಳೀಯರು ಚಿಂತಿತರಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button