ಮಡಿಕೇರಿ: ಕೋವಿಡ್ ನಿಯಮ ಪಾಲಿಸದ ವರ್ತಕ

ಮಡಿಕೇರಿ: ಕೊರೋನಾ ಎರಡನೇ ಅಲೆಯ ವೈರಸ್ ಸರಪಳಿಯನ್ನು ಮುರಿಯಲು ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ಯಶಸ್ವಿಯಾಗುತ್ತಿದೆ. ಲಾಕ್ಡೌನ್ ಜಾರಿಯಲ್ಲಿದ್ದರೂ ವಾರದ ಮೂರು ದಿನ ಬೆಳಿಗ್ಗೆ ೬ರಿಂದ ೧೦ರ ವರೆಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ ೬ರಿಂದ ೧೦ರ ವರೆಗೆ ನಗರದ ಜನತೆ ತಮ್ಮ ಮನೆಯಿಂದ ಹೊರಬಂದು ದಿನನಿತ್ಯ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಅದರಂತೆ ಇಂದು ಶುಕ್ರವಾರ ಮಡಿಕೇರಿ ನಗರದಲ್ಲಿ ಖರೀದಿ ಜೋರಾಗಿತ್ತು.
ನಗರದ ಸರ್ಕಾರಿ ಬಸ್ ನಿಲ್ದಾಣ, ಟೋಲ್ಗೇಟ್, ಮಾರ್ಕೆಟ್ ಬಾಗದಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದಿದ್ದು, ಗ್ರಾಹಕರು ಖರೀದಿಗಾಗಿ ಮುಗಿಬಿದ್ದಿದ್ದರು. ನಗರದಲ್ಲಿ ಜನಸಂಚಾರ ಅಧಿಕವಾಗಿದ್ದರಿಂದ ಮಡಿಕೇರಿಯ ಚೌಕಿ, ಟೋಲ್ಗೇಟ್ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ವಾಹನ ದಟ್ಟಣೆ ಎದುರಾಗಿತ್ತು.
ಗ್ರಾಹಕರು ದಿನಸಿ ಖರೀದಿಸುವ ತವಕದಲ್ಲಿ ಸಾಮಾಜಿಕ ಅಂತರ ಮೆರೆತಂತಿತ್ತು. ಅಲ್ಲಲ್ಲಿ ಪೋಲೀಸ್ ವಾಹನಗಳು ನಗರದಲ್ಲಿ ಗಸ್ತು ತಿರುಗುತ್ತಿತ್ತು. ಜನದಟ್ಟಣೆಯ ಪ್ರದೇಶಗಳಲ್ಲಿ ಪೊಲೀಸರು ಸಾಮಾಜಿಕ ಅಂತರ ಪಾಲಿಸುವಂತೆ ಜನರಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿದ್ದರು. ಪೊಲೀಸರು ಮತ್ತು ಅಧಿಕಾರಿಗಳು ನಗರದ ವಿವಿದ ಅಂಗಡಿಗಳಿಗೆ ತೆರಳಿ ಅನುಮತಿಯಿಲ್ಲದೇ ತರೆದಿದ್ದ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿ, ಕೋವೀಡ್ ನಿಯಮ ಪಾಲಿಸದ ವರ್ತಕರಿಗೆ ದಂಡದ ಬಿಸಿ ಮುಟ್ಟಿಸಿದರು