ಜಿಲ್ಲಾ ಸುದ್ದಿ
ಚಿಕ್ಕಮಗಳೂರಲ್ಲಿ ಲಾಕ್ಡೌನ್ ಸಡಿಲಿಕೆ; ಮದ್ಯ, ಮಾಂಸಕ್ಕೆ ಮುಗಿಬಿದ್ದ ಜನ

ಚಿಕ್ಕಮಗಳೂರು: ಜಿಲ್ಲಾಡಳಿತ ಕಳೆದ ಮೇ.20ರಿಂದ ವಿಧಿಸಿದ್ದ ಸಂಪೂರ್ಣ ಲಾಕ್ಡೌನ್ ಗೆ ಕೊಂಚ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲರೂ ದಿನಸಿ ಸೇರಿದಂತೆ ಖರೀದಿಗೆ ಮುಂದಾದರೆ. ಮತ್ತೊಂದೆಡೆ ಮದ್ಯಪ್ರಿಯರು ಹಾಗೂ ಚಿಕನ್ ಅಂಗಡಿ ಮುಂದೆ ಬೆಳಬೆಳಗ್ಗೆ ಸಾಲುಗಟ್ಟಿ ನಿಂತು ಖರೀದಿಯಲ್ಲಿ ನಿರತರಾಗಿದ್ದರು.
ಜಿಲ್ಲಾ ಕೇಂದ್ರದ ನಗರದ ಭಾಗಗಳಲ್ಲಿ ಔಟ್ಲೆಟ್ ಮದ್ಯದಂಗಡಿ ಮುಂದೆ ಜನ ಬ್ಯಾಗ್ ಹಿಡಿದುಕೊಂಡುಕೊಂಡು ಸಾಲಿನಲ್ಲಿ ನಿಂತು ಫುಲ್ ಬಾಟಲಿ ಖರೀದಿಸಿದ್ದು ಜೋರಾಗಿತ್ತು . ಇದೇ ರೀತಿಯಲ್ಲಿ ಟೆಂಡರ್ ಚಿಕನ್ ಅಂಗಡಿ ಮುಂದೆ ಜನರು ಸಾಲು ಸಾಲಾಗಿ ನಿಂತು ಖರೀದಿಸಿದರೆ. ಮಟನ್ ದುಬಾರಿಯಾಗಿರುವುದರಿಂದ ಜನರ ಆಸಕ್ತಿ ಕಡಿಮೆ ಇತ್ತು.
ದುಡ್ಡಿದ್ದವರ ಚಿಕನ್-ಎಣ್ಣೆ ಖರೀದಿ ಜೋರಾಗಿದ್ದರೆ. ಅವತ್ತಿನ ಕೂಲಿ ಮಾಡಿ ಜೀವನ ಸಾಗಿಸುವವರು ಬೇಲೂರು ರಸ್ತೆಯ ಆಜಾದ್ ಪಾರ್ಕ್ ಬಳಿ ಸ್ವಾಮಿ ಕೂಲಿಗೆ ಬರುತ್ತೇವೆ ಕರೆದುಕೊಂಡು ಹೋಗಿ ಎಂದು ವಾಹನ ನಿಲ್ಲಿಸಿದವರ ಮುಂದೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು