ಜಿಲ್ಲಾ ಸುದ್ದಿ
ಮಡಿಕೇರಿ; ಕೆಲ ಸರ್ಕಾರಿ ಬಸ್ ಸಂಚಾರ

ಮಡಿಕೇರಿ : ಕೊರೋನಾ ಅಲೆ ತಗ್ಗಿಸಲು ಲಾಕ್ಡೌನ್ ಚಾಲ್ತಿಯಲ್ಲಿದ್ದು, ಜಿಲ್ಲೆಯ ಜನತೆ ಸಹಕಾರ ನೀಡುತ್ತಿದ್ದಾರೆ.
ಸರಕಾರ ವಾರದಲ್ಲಿ ಮೂರು ದಿನಗಳ ಕಾಲ ದಿನಸಿ ಖರೀದಿಸಲು ಮತ್ತು ಪ್ರತಿದಿನ ಬೆಳಿಗ್ಗೆ ೬ರಿಂದ ೧೦ರ ವರೆಗೆ ಹಾಲು ಮತ್ತು ದಿನಪತ್ರಿಕೆ ಖರೀದಿಸಲು ಅವಕಾಶ ನೀಡಿತ್ತು. ಅದರಂತೆ ಮಡಿಕೇರಿಯಲ್ಲಿ ಬೆಳಿಗ್ಗೆ ಕೆಲ ಅಂಗಡಿಗಳ ಮುಂದೆ ಹಾಲು ಮತ್ತು ದಿನಪತ್ರಿಕೆ ಮಾರಾಟ ಕಂಡುಬಂತು. ರಸ್ತೆಗಳಲ್ಲಿ ಅಲ್ಲಲ್ಲಿ ಕೆಲ ವಾಹನಗಳು ಸಂಚರಿಸುತ್ತಿದ್ದವು. ಸರ್ಕಾರಿ ಬಸ್ ನಿಲ್ದಾಣ ಸ್ಥಬ್ದವಾಗಿದ್ದರೂ ಕೆಲವು ಸರ್ಕಾರಿ ಬಸ್ಗಳ ಸಂಚಾರ ಕಂಡುಬಂತು.
ಸರ್ಕಾರ ಅನುಮತಿಸಿದ ಸರ್ಕಾರಿ ಕಛೇರಿಗಳು ಮತ್ತು ಬ್ಯಾಂಕುಗಳು,
ಸಂಸ್ಥೆಯ ಬಾಗಿಲು ಮುಚ್ಚಿ ಒಳಗೆ ಕೆಲಸ ನಿರ್ವಹಿಸುತ್ತಿದ್ದರು.