ಜಿಲ್ಲಾ ಸುದ್ದಿ
ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿ

ಬಾಗಲಕೋಟೆ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಮೊಬೈಲ್ ಟವರ್ ಏರಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಡೆದಿದೆ.
ಗಿರಿಸಾಗರ ಗ್ರಾಮದ 42ವರ್ಷದ ಹನಮಂತ ಹೊಟ್ಟೆನ್ನವರ್ ಎಂಬಾತ ಕುಡಿದು ಮತ್ತಿನಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದನು.ಮನೆಯಲ್ಲಿ ಜಗಳವಾಡಿ ಮೊಬೈಲ್ ಟವರ್ ಏರಿದ್ದು, ಪತ್ನಿ ಊರಿಗೆ ಹೋಗಿರುವುದರಿಂದ ಮನನೊಂದು ಟವರ್ ಏರಿ ರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಬೀಳಗಿ ಪೊಲೀಸ್ ಹಾಗೂ ಅಗ್ನಿಶ್ಯಾಮಕ ಸಿಬ್ಬಂದಿ ದೌಡಾಯಿಸಿ ಸತತ ಎರಡು ಗಂಟೆಗಳ ಬಳಿಕಮನವೊಲಿಸಿ ಹಗ್ಗ ಕಟ್ಟಿ ಟವರ್ ನಿಂದ ಕೆಳಗೆ ಕರೆತಂದಿದ್ದಾರೆ. ಹನುಮಂತನನ್ನು ಕೆಳಗಿಳಿಸಿದ ಬಳಿಕ ಗ್ರಾಮಸ್ಥರು, ಪೊಲೀಸರು, ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆ ಬೀಳಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.