ಜಿಲ್ಲಾ ಸುದ್ದಿ
ಲಾಕ್ಡೌನ್ ಇದ್ದರೂ ನಿಂತಿಲ್ಲ ಕಲ್ಲು ಗಣಿಗಾರಿಕೆ

ಉಡುಪಿ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಗಳು ಲಾಕ್ ಡೌನ್ ಅದರೂ ನಿಂತಿಲ್ಲ ಕಲ್ಲು ಗಣಿಗಾರಿಕೆ ಆದರೆ ಇದೀಗ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ ಎಂದು ತಿಳಿದು ಬಂದಿದೆ.
ಅರೆಶಿರೂರು, ತೂದಳ್ಳಿ, ಗಂಗನಾಡು, ಶಿರೂರು, ಕೆರಾಡಿ, ಜಡ್ಕಲ್, ಮುದೂರು, ಹೊಸೂರು ವಂಡ್ಸೆ, ನೆಂಪು, ನೇರಳಕಟ್ಟೆ, ಕಟ್ ಬೇಲ್ತೂರು, ಆಲೂರು, ಯಡಮೊಗೆ, ಹಳ್ಳಿಹೊಳೆ, ಅಜ್ರಿ ಗ್ರಾಮಗಳಲ್ಲಿ ಕಲ್ಲು ಕೋರೆ ಕೆಲಸ ನಡೆಯುತ್ತಿದೆ.ಹಾಗೂ ಜಿಲ್ಲೆಯ ಮೊದಲಾದ ಭಾಗಗಳಲ್ಲಿ ಲಾಕ್ ಡೌನ್ ಸಂದರ್ಭದಲ್ಲೂ ಎಗ್ಗಿಲ್ಲದೆ ನಡಿತಾ ಇದೆ ಕಲ್ಲು ಗಣಿಗಾರಿಕೆ ಎಂದು ತಿಳಿದುಬಂದಿದೆ.
ಈ ಭಾಗದ ಪ್ರತಿ ಗ್ರಾಮದಲ್ಲಿನ 20 ರಿಂದ 25 ಕಲ್ಲು ಗಣಿಗಳು ಇಂದು ಕೂಡ ಕಾರ್ಯಚರಣೆಯಲ್ಲಿ ನಿರತವಾಗಿದೆ.ಪ್ರತಿ ದಿನವು 25 ಸಾವಿರ ಕ್ಕೂ ಅಧಿಕ ಕಲ್ಲುಗಳು ಅಕ್ರಮ ಗಣಿಗಳಿಂದ ಸಾಗಾಟ ವಾಗುತ್ತಿದೆ ಮತ್ತು ಸಾಕಷ್ಟು ದೂರುಗಳು ಇದ್ದರು ಇದುವರೆಗೆ ಗಣಿ ಇಲಾಖೆಯಿಂದ ಯಾವುದೇ ಕ್ರಮ ಇಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.