ಜಿಲ್ಲಾ ಸುದ್ದಿ

ಭಟ್ಕಳದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಮನೆ ಮಂಜೂರಾತಿ ತಡೆಹಿಡಿದ ಶಾಸಕ

ವರದಿ: ತೇಜಸ್ವಿ 

ಕಾರವಾರ : ಭಟ್ಕಳ ತಾಲೂಕಿನಲ್ಲಿ ಕಳೆದ ಬಾರಿ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡಿದ್ದ ಬಿಜೆಪಿ ಕಾರ್ಯಕರ್ತರಾದ ವಸಂತ ಸಣ್ತಮ್ಮ ನಾಯ್ಕ ಅವರಿಗೆ ಶಾಸಕ ಸುನೀಲ್ ನಾಯ್ಕ ತಾವೇ ಮನೆಯನ್ನು ಮಂಜೂರು ಮಾಡುವಂತೆ ಶಿಪಾರಸ್ಸು ಮಾಡಿ ಈಗ ಕೆಲವು ರಾಜಕೀಯ ಕಾರಣದ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತನ ಮನೆ ಮಂಜೂರಾತಿಯನ್ನು ರದ್ದು ಪಡಿಸುವಂತೆ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿರುತ್ತಾರೆ.ಈ ಘಟನೆ ತಾಲೂಕಿನಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು,ಶಾಸಕ ಸುನೀಲ್‌ ನಾಯ್ಕ ತಮ್ಮದೇ ಪಕ್ಷದ ಬಡ ಕಾರ್ಯಕರ್ತನ ಮೇಲೆ ಭ್ರಮ್ಮಾಸ್ತ್ರವನ್ನು ಪ್ರಯೋಗಿಸಿ ದ್ದಾರೆಯೇ ? ಒಂದು ವೇಳೆ ಪ್ರಯೋಗಿಸಿದ್ದರೂ ಯಾಕಾಗಿ ಪ್ರಯೋಗಿಸಿದರು ಎಂಬುದು ಇನ್ನೂ ನಿಗೂಢವಾಗಿದೆ.

ತಾಲೂಕಿನಲ್ಲಿ ಬಿಜೆಪಿಯ ಪರಿಸ್ಥಿತಿ ಒಡೆದ ಮನೆಯಂತಾ ಗಿದೆ.ತಾಲೂಕಿನ ಮೂಲೆ ಮೂಲೆಗಳಲ್ಲಿ ಆಡಳಿತ ವಿರೋಧಿ ಬಂಡಾಯದ ಬಿಸಿ ತಾರಕಕ್ಕೆ ಏರುತ್ತಿದೆ.ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ತಾಲೂಕಿನ ಬೈಲೂರು ದೊಡ್ಡಬಲ್ಸೆ ಬಿಜೆಪಿಯ ಮೂಲ ಕಾರ್ಯಕರ್ತರಾದ,ಬಡವರೂ ಆದ ವಸಂತ ಸಣ್ತಮ್ಮ ನಾಯ್ಕ ಅವರ ಮಂಜೂರಾದ ಮನೆಯನ್ನು ಬಿಜೆಪಿ ಪಕ್ಷದ ಶಾಸಕ ಸುನೀಲ್‌ ನಾಯ್ಕ ಅವರು ರದ್ದು ಪಡಿಸುವಂತೆ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವುದೇ ಸಾಕ್ಷಿಯಾಗಿದೆ.

2019 ರಲ್ಲಿ ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಆದ ಅತೀವೃಷ್ಟಿ ಕಾರಣ ವಸಂತ ಅವರ ಮನೆ ಸಂಪೂರ್ಣ ಬಿದ್ದು ಹೋಗಿತ್ತು. ಇದನ್ನು ಗಮನಿಸಿದ ಶಾಸಕ ಸುನೀಲ್‌ ನಾಯ್ಕ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪಂಚನಾಮೆಯನ್ನು ನಡೆಸಿ ಮನೆ ಮಂಜೂರಿ ಮಾಡಿಸು ವಂತೆ ಶಿಪಾರಸ್ಸು ಮಡಿದ್ದರು. ಆದರೆ ಈಗ ಇದೆ ನಮ್ಮ ಶಾಸಕರು ವಸಂತ ಸಣ್ತಮ್ಮ ನಾಯ್ಕ ಅವರು ನಕಲಿ ದಾಖಲೆ ಸೃಷ್ಟಿಸಿ ಯಾವುದೋ ಮನೆಯನ್ನು ತೋರಿಸಿ ಎರಡು ಮನೆ ಮಂಜೂರು ಮಾಡಿಕೊಂಡಿದ್ದಾರೆ.ಇವರ ಮನೆ ಮಂಜೂರಾತಿಯನ್ನು ರದ್ದು ಮಾಡಿ ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಅರ್ಜಿಯನ್ನು ನೀಡಿದ್ದಾರೆ.

ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ 2019 ರಲ್ಲಿ ಅತೀವೃಷ್ಟಿ ಉಂಟಾದ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ತಮ್ಮ ಕಾರ್ಯಕರ್ತನಿಗೆ ಮನೆ ಮಂಜೂರು ಮಾಡಿಸುವ ಭರವಸೆಯನ್ನು ಕೊಡುವ ಸಂದರ್ಭದಲ್ಲಿ ಇಲ್ಲದ ನಕಲಿ ದಾಖಲೆ.ಈಗ ಅಂದರೆ 2021 ರಲ್ಲಿ ಸೃಷ್ಟಿಯಾಗಿ ಅದು ಒಮ್ಮಿಂದೊಮ್ಮೆ ಶಾಸಕರ ಗಮನಕ್ಕೆ ಬಂದು ಶಾಸಕರು ವಸತಿ ಸಚಿವರಿಗೆ ದೂರು ಅರ್ಜಿಯನ್ನು ಸಲ್ಲಿಸುತ್ತಾರೆ ಎಂದರೆ ಅಸಹಜ ಎಂಬುದು ಇಲ್ಲಿ ಸಾಭೀತಾಗುತ್ತದೆ.

ಈ ಎಲ್ಲಾ ಅಂಶಗಳೆ ಸಾರಿ ಸಾರಿ ಹೇಳುತ್ತದೆ.ತಾಲೂಕಿನ ಬಿಜೆಪಿಯಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದ ಪರಿಸ್ಥಿತಿ ಇದೆ.ಇವರ ಈ ರಾಜಕೀಯ ದೊಂಬರಾಟದ ಕಾರಣ ಬಿಜೆಪಿ ಪಕ್ಷದ ನಾಮಧಾರಿ ಸಮಾಜದ ಬಡವನೊಬ್ಬ ಪೇಚಿಗೆ ಸಿಲುಕಿಕೊಂಡು ಮೊದಲೇ ಅಸ್ತಮಾ ರೋಗಿಯಾಗಿರುವ ವಸಂತ ಸಣ್ತಮ್ಮ ನಾಯ್ಕ ಅವರು ಅತೀ ಬಡವರಾಗಿದ್ದು, ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಒಬ್ಬ ಪುಟ್ಟ ಮಗನನ್ನು ಹೊಂದಿದ್ದಾರೆ.ಈಗ ಜೋಪಡಿ ಗುಡಿಸಲಿನಲ್ಲಿ ಬದುಕು ನಡೆಸುತ್ತಿದ್ದಾರೆ.

ಈ ಬಗ್ಗೆ ಅವರು ಮಾತನಾಡಿ, ಹಿಂದೆ ನಮ್ಮ ಮನೆ ಮಂಜೂರು ಮಾಡಿಸುವುದಾಗಿ ಶಾಸಕ ಸುನೀಲ್‌ ನಾಯ್ಕ ಅವರು ಹೇಳಿದ್ದರು.ಆದರೆ ಈಗ ರಾಜಕೀಯ ಕಾರಣಗಳಿಂದ ನಮ್ಮ ಮನೆ ಮಂಜೂರಾತಿ ಯನ್ನು ತಡೆಹಿಡಿದಿದ್ದಾರೆ.ನಾನು 1995 ರಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ.ಈಗ ನನ್ನ ಮನೆ ಮಂಜೂರಾತಿಯನ್ನು ರದ್ದು ಮಾಡಿಸಲು ಮುಂದಾಗಿದ್ದಾರೆ.ಅವರು ಈಗ ತಾನೇ ಪಕ್ಷಕ್ಕೆ ಬಂದವರಾಗಿ ದ್ದಾರೆ.ನಾನು ಬಿಜೆಪಿಯ ಮೂಲ ನಿಷ್ಟಾವಂತ ಕಾರ್ಯಕರ್ತ ನನಗೆ ನ್ಯಾಯ ಬೇಕು ಎಂದು ಅವಲತ್ತುಕೊಂಡರು.

ಪ್ರಕರಣದ ಬಗ್ಗೆ ಬೈಲೂರು ಗ್ರಾಮ ಪಂಚಾಯತ್‌ ಸದಸ್ಯ ಕೃಷ್ಣಾ ನಾಯ್ಕ ಬಲ್ಸೆ ಅವರು ಮಾತನಾಡಿ, 2019 ರಲ್ಲಿ ಅತಿವೃಷ್ಟಿಯ ಕಾರಣ ವಸಂತ ಸಣ್ತಮ್ಮ ನಾಯ್ಕ ಅವರ ಮನೆ ಬಿದ್ದು ಹೋಗಿತ್ತು.ಆ ಸಂದರ್ಭ ದಲ್ಲಿ ತಹಶೀಲ್ದಾರರ ಸಮೇತ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ ಪಂಚನಾಮೆಯನ್ನು ಮಾಡಿಸಿ ಮನೆ ಮಂಜೂರಾತಿಯ ಭರವಸೆಯನ್ನು ನೀಡಿ ಮಂಜೂರಾತಿಗೆ ಶಿಪಾರಸ್ಸನ್ನು ಮಾಡಿರುತ್ತಾರೆ.ಆದರೆ ಈಗ ಕೆಲವು ರಾಜಕೀಯ ಕಾರಣದಿಂದ ತಾಲೂಕಿನಲ್ಲಿ ಬಿಜೆಪಿಯ ಎರಡು ತಂಡ ಮಾಡಿಕೊಂಡು ಅಮಾಯಕ ವಸಂತ ಅವರ ಮನೆ ಮಂಜೂರಾತಿಯನ್ನು ರದ್ದು ಮಾಡಿಸಲು ಮುಂದಾಗಿದ್ದಾರೆ. ಇದು ಶಾಸಕರಿಗೆ ಶೋಭೆಯನ್ನು ತರುವುದಿಲ್ಲ.ರಾಜ್ಯದಲ್ಲೇ ನಡೆಯದಿರುವ ಘಟನೆ ನಮ್ಮ ತಾಲೂಕಿನಲ್ಲಿ ನಡೆಯುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ತಾಲೂಕಿನ ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಂಜುನಾಥ ನಾಯ್ಕ ಅವರು ಮಾತನಾಡಿ, ಬೈಲೂರು ದೊಡ್ಡ ಬಲ್ಸೆಯ ಬಿಜೆಪಿ ಮೂಲ ಕಾರ್ಯಕರ್ತ ರಾದ ವಸಂತ ಸಣ್ತಮ್ಮ ನಾಯ್ಕ ಅವರ ಮನೆಯ ಮಂಜೂರಾತಿ ಯನ್ನು ನಕಲಿ ದಾಖಲೆ ಎಂಬ ಸುಳ್ಳು ಆರೋಪವನ್ನು ಮುಂದಿಟ್ಟುಕೊಂಡು ಶಾಸಕ ಸುನೀಲ್ ನಾಯ್ಕ ಅವರು ರದ್ದು ಪಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.ಇದು ಸರಿಯಾದ ಕ್ರಮವಲ್ಲ.ಹಿಂದೆ ನಾನು ಗ್ರಾಮ ಪಂಚಾಯತ ಅಧ್ಯಕ್ಷನಾಗಿರುವ ಸಂದರ್ಭ ದಲ್ಲೇ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸರಕಾರಕ್ಕೆ ಕಳುಹಿಸಿ ಮಂಜೂರಾತಿಯನ್ನು ಪಡೆಯಲಾಗಿತ್ತು.ಆದರೆ ಈಗ ಶಾಸಕ ಸುನೀಲ್ ನಾಯ್ಕ ಅವರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ತಮ್ಮ ಪಕ್ಷದ ಕಾರ್ಯಕರ್ತರಾದ ವಸಂತ ಸಣ್ತಮ್ಮ ನಾಯ್ಕ ಅವರ ಮಂಜೂರಾದ ಮನೆಯನ್ನು ರದ್ದುಪಡಿಸಲು ಹೊರಟಿದ್ದಾರೆ. ಅವರಿಗೆ ಅನ್ಯಾಯವಾದಲ್ಲಿ ನಾವು ಉಚ್ಛನ್ಯಾಯಾಲಯದ ಮೆಟ್ಟಿಲೇರಲು ಕೂಡಾ ಸಿದ್ಧರಿದ್ದೇವೆ ಎಂದು ಹೇಳಿದರು.

ಒಟ್ಟಾರೆ ಭಟ್ಕಳ ತಾಲೂಕಿನ ಬಿಜೆಪಿಯಲ್ಲಿ ಕೆಲವು ವ್ಯಕ್ತಿಗಳು ನಡೆಸುತ್ತಿರುವ ಸಂಚಿನ ಫಲವಾಗಿ ಇಂದು ಒಬ್ಬ ನಿಷ್ಟಾವಂತ ಮೂಲ ಬಿಜೆಪಿ ಕಾರ್ಯಕರ್ತನ ಮನೆ ಒಡೆಯುವ ಕೆಲಸ ನಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಈ ಬಗ್ಗೆ ಬಿಜೆಪಿ ಪಕ್ಷದ ಜಿಲ್ಲೆ ಹಾಗೂ ರಾಜ್ಯದ ಧುರೀಣರು ಮಧ್ಯ ಪ್ರವೇಶಿಸಿ ತಾಲೂಕಿನ ಬಿಜೆಪಿ ಪಕ್ಷದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸವಾಗಬೇಕು ಹಾಗೂ ಬಿಜೆಪಿಯ ನಿಷ್ಟಾವಂತ ನಾಮಧಾರಿ ಬಡ ಕಾರ್ಯಕರ್ತನ ಮನೆ ಉಳಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರಾದ ನಾವೇ ಕ್ರಮವನ್ನು ತೆಗೆದು ಕೊಳ್ಳುವುದರ ಮೂಲಕ ತಕ್ಕ ಉತ್ತರವನ್ನು ನೀಡಬೇಕಾಗು ತ್ತದೆ ಎಂದು ತಾಲೂಕಿನ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button