ಮೈಸೂರು

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮೈಸೂರು: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗರಾಜು (65) ಆತ್ಮಹತ್ಯೆಗೆ ಶರಣಾದ ರೈತ. ನಾಗರಾಜು 7 ಎಕರೆ 10 ಗುಂಟೆ ಜಮೀನು  ಹೊಂದಿದ್ದರು. ಜಮೀನಿನಲ್ಲಿ ಹತ್ತಿ ಹಲಸಂದೆ ಮೆಣಸಿನಕಾಯಿ ಸೇರಿ ಹಲವು ಬೆಳೆ ಬೆಳೆದಿದ್ದರು. ಬೆಳೆಗಾಗಿ 2 ಲಕ್ಷ ರೂ ಸಾಲ ಮಾಡಿದ್ದರು.

ಜತೆಗೆ ಮಗಳ ಮದುವೆಗೆಂದು 4 ಲಕ್ಷ ಸಾಲ, ಹಾಗೆಯೇ ಎತ್ತಿನ ಗಾಡಿಯಿಂದ ಬಿದ್ದಿದ್ದ ಮಗನ ಆಸ್ಪತ್ರೆ ಚಿಕಿತ್ಸೆಗಾಗಿ ನಾಗರಾಜು 1.5 ಲಕ್ಷ ರೂ ಸಾಲ  ಮಾಡಿದ್ದರು. ಆದರೆ ಸಾಲ ತೀರಿಸಲಾಗದೆ ಪರದಾಡುತ್ತಿದ್ದ ನಾಗರಾಜು, ಜಮೀನಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು  ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button