ಆಸ್ಪತ್ರೆ ಮುಂಭಾಗವೇ ಹೆರಿಗೆ: ನವಜಾತ ಶಿಶು ಸಾವು

ಮಂಡ್ಯ: ಗರ್ಭಿಣಿಯನ್ನ ಅಡ್ಮಿಟ್ ಮಾಡಿಕೊಳ್ಳದ ಪರಿಣಾಮ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿದ ಆರೋಪ ಮಂಡ್ಯ ಮಿಮ್ಸ್ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.
ನಿನ್ನೆ ಹೆರಿಗೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೋನು ಎಂಬ ಮಹಿಳೆ ಬಂದಿದ್ದಳು. ಕೊವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಅಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ ರಿಪೋರ್ಟ್ ತರುವಂತೆ ಹೇಳಿ ವಾಪಸ್ ಕಳುಹಿಸಿದ್ದಾರೆ. ಇಂದು ಕೂಡ 2 ಗಂಟೆ ಕಾದರು ದಾಖಲು ಮಾಡಿಕೊಂಡಿರಲಿಲ್ಲ. ಈ ವೇಳೆ ಆಸ್ಪತ್ರೆ ಮುಂಭಾಗ ನಿಂತಿದ್ದ ಮಹಿಳೆಗೆ ಅದೇ ಸಮಯಕ್ಕೆ ಹೆರಿಗೆಯಾಗಿ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಮಗು ಸಾವಿಗೆ ಪೋಷಕರೇ ಕಾರಣ ಎಂದ ಮಿಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಸೋನು ಅವರಿಗೆ ಏಳು ತಿಂಗಳು ಆಗಿತ್ತು. ನಿನ್ನೆ ಸೋನು ಅವರು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಗುವಿನ ಹೃದಯ ಬಡಿತ ಕೇಳುತ್ತಿರಲಿಲ್ಲ. ಆಸ್ಪತ್ರೆಗೆ ಬಂದು ದಾಖಲಾಗಿ ಎಂದು ನಾವು ಹೇಳಿದ್ದವು ಎಂಬುದು ಅವರ ಹೇಳಿಕೆ.
ಇಂದು ಅವರು ಬಂದಾಗ ಆ್ಯಂಟಿಜನ್ ಟೆಸ್ಟ್ ಮಾಡಿಕೊಂಡಿದ್ದೇವೆ. ನಂತರ ದಾಖಲು ಮಾಡಿಕೊಳ್ಳಲು ಪ್ರಕ್ರಿಯೆ ನಡೆಸುತ್ತಿದ್ದವು. ಈ ವೇಳೆ ಸೋನು ಆಭರಣ ಬಿಚ್ಚಿಡಲು ಹೊರಗೆ ಹೋಗಿದ್ದರು. ಆ ವೇಳೆ ಈ ಅನಾಹುತ ಆಗಿದೆ. ಇದರಲ್ಲಿ ನಮ್ಮ ತಪ್ಪು ಇಲ್ಲ. ಪೋಷಕರೇ ಇದಕ್ಕೆ ಕಾರಣ. ತಪ್ಪು ಮುಚ್ಚಿಕೊಳ್ಳಲು ಪೋಷಕರ ಮೇಲೆ ತಪ್ಪು ಹಾಕಿದ ಅಧಿಕಾರಿಗಳು ಹೇಳಿದ್ದಾರೆ.
ಪೋಷಕರ ತಪ್ಪೋ, ಆಸ್ಪತ್ರೆಯ ತಪ್ಪೋ. ಆದರೆ, ಇನ್ನೂ ಕಣ್ಣು ಬಿಡದ ಹಸುಗೂಸು ಪ್ರಾಣ ತ್ಯಾಗ ಮಾಡಿದ್ದಂತೂ ನಿಜಕ್ಕೂ ದುರಂತ.