ಜಿಲ್ಲಾ ಸುದ್ದಿ

ಮಡಿಕೇರಿಯಲ್ಲಿ ಹೊಸ 19 ಕೋವಿಡ್ ಕೇಸ್​ಗಳು ದೃಢ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆ ವೇಳೆಗೆ 245 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 233 ಆರ್.ಟಿ.ಪಿ.ಸಿ.ಆರ್ ಮತ್ತು 12 ಪ್ರಕರಣಗಳು ಕ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 319 ಮರಣ ಪ್ರಕರಣಗಳು ವರದಿಯಾಗಿದೆ. ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 355 ಆಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 75 ಹೊಸ, ಸೋಮವಾರಪೇಟೆ ತಾಲ್ಲೂಕಿನಲ್ಲಿ 118 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 52 ಹೊಸ ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 24,486 ಆಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 328 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇಲ್ಲಿಯವರೆಗೆ ಒಟ್ಟು 21,813 ಮಂದಿ ಗುಣಮುಖರಾಗಿದ್ದಾರೆ.

2354 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.16.26 ರಷ್ಟು ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಇಂದು‌ ಸೋಮವಾರ ಜಿಲ್ಲೆಯಲ್ಲಿ ಜನರು ದಿನಸಿ ಖರೀದಿಗೆ ಮುಗಿಬಿದ್ದಿದ್ದರು. ಮಡಿಕೇರಿಯ ಕೆಎಸ್ಅರ್ಟಿಸಿ ಬಸ್ ನಿಲ್ದಾಣ, ಮಾರ್ಕೆಟ್, ಟೋಲ್ಗೇಟ್ ಹಾಗೂ ಪಟ್ಟಣದ ವಿವಿದೆದೆ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೆಡೆ ಉತ್ತಮ ವ್ಯಾಪಾರ ವಹಿವಾಟು ಕಂಡರೂ ರಸ್ತೆ ಬದಿಯ ಕೆಲ ವ್ಯಾಪಾರಿಗಳ ಮುಖದಲ್ಲಿ ತಾವು ತಂದ ತರಕಾರಿಗಳು ಹಣ್ಣುಗಳು ಮಾರಾಟವಾಗದ ಹತಾಷೆ ಕಾಣುತ್ತಿತ್ತು. ಮಡಿಕೇರಿ ನಗರದಲ್ಲಿ ವಾಹನ ಸಂಚಾರ ಹೇರಳವಾಗಿ ಅಲ್ಲಲ್ಲಿ ಟ್ರಾಫಿಕ್ ಕಂಡು ಬರುತ್ತಿತ್ತು. ಪೋಲೀಸರು ಅಲ್ಲಲ್ಲಿ ತಮ್ಮ ವಾಹನ ನಿಲ್ಲಿಸಿ ಪರೀಶಿಲನೆಯಲ್ಲಿ ತೊಡಗಿದ್ದರು.

ಇನ್ನೂ ಕೊಡಗಿನ ಶನಿವಾರಸಂತಯಲ್ಲಿ ಜನವೊ ಜನ. ಇಂದು ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಇಂದು ದಿನ ನಿಗದಿ ಮಾಡಿದ್ದರಿಂದ ಸಾಮಾಜಿಕ ಅಂತರವಿಲ್ಲದೆ ಜನರು ಒಮ್ಮೆಲೆ ಶನಿವಾರಸಂತೆಯಲ್ಲಿ ಸುಳಿದಾಡಿದರು.

ಶನಿವಾರಸಂತೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿಯವರು ಹಾಗೂ ಪೊಲೀಸ್ ಠಾಣಾಧಿಕಾರಿಯವರು ಜನರನ್ನು ಚದುರಿಸುತ್ತಿದ್ದರು. ತರಕಾರಿ ವ್ಯಾಪಾರಕ್ಕೆ ಗುಡುಗಳಲೆ ಜಾತ್ರೆ ಬಾಣೆಯನ್ನು ನಿಗದಿಪಡಿಸಿದ್ದರು ಸಹ ಕೆಆರ್.ಸಿ ವೃತ್ತದಲ್ಲಿ ತರಕಾರಿ ವ್ಯಾಪಾರ ಜೋರಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button