ಉತ್ತರ ಕನ್ನಡಜಿಲ್ಲಾ ಸುದ್ದಿ
ಕಾರವಾರ: ಓಮಿನಿ ಮತ್ತು ಆಟೋ ಡಿಕ್ಕಿ; ಚಾಲಕರಿಬ್ಬರೂ ಗಂಭೀರ

ಕಾರವಾರ: ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಮೀನು ತುಂಬಿಕೊಂಡು ಬಂದ ಲಗೇಜ್ ಆಟೋ ಮತ್ತು ಓಮಿನಿ ನಡುವೆ ಸಂಭವಿಸಿದ ಅಪಘಾತದಲ್ಲಿ ಚಾಲಕರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾಗರದ ಚಂದ್ರಕಾಂತ ಗಾವಡಿ ಮತ್ತು ಬಾಲಚಂದ್ರ ಗಾವಡಿ ಎಂಬ ಸಹೋದರರಿಬ್ಬರು ತಮ್ಮ ತಾಯಿಯ ಕ್ರಿಯಾಕರ್ಮ ನೆರವೇರಿಸಲು ಓಮಿನಿಯಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದರು. ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಅಂಕೋಲಾದಿಂದ ಮೀನು ತುಂಬಿಕೊಂಡು ಬಂದ ಲಗೇಜ್ ಆಟೋ ಮತ್ತು ಓಮಿನಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಆಟೋ ಚಾಲಕ ಗುಂದದ ನಿವಾಸಿ ಓಲವಿನ್ ಮತ್ತು ಓಮಿನಿ ಚಾಲಕ ಗಿರೀಶ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಹೋದರರಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ