ಜಿಲ್ಲಾ ಸುದ್ದಿ
ಖಾಜಾ ಬಂದೇನವಾಜ್ ಉರುಸ್: ಯಾತ್ರಾರ್ಥಿಗಳಿಗೆ ಅನುಮತಿ ನಿಷೇಧ

ಕಲಬುರಗಿ: ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಹಾಗೂ ಎರಡನೇ ಮೆಕ್ಕಾ ಎಂಬ ಖ್ಯಾತಿಯ ಕಲಬುರಗಿಯ ಖ್ವಾಜಾ ಬಂದೆ ನವಾಜ್ರ 617 ನೇ ಉರುಸ್ ನಾಳೆ ಜೂನ್ 27 ರಂದು ಪ್ರಾರಂಭವಾಗಲಿದೆ.
ಕೋವಿಡ್ ಹಿನ್ನಲೆ ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ಉರುಸ್ ಆಯೋಜಿಸಲಾಗುತ್ತಿದೆ. ಪ್ರತಿವರ್ಷದಂತೆ ಸಾರ್ವಜನಿಕ ಉದ್ಯಾನವನ ಬದಲಾಗಿ ದರ್ಗಾ ಹತ್ತಿರದಿಂದಲೇ ಸಂಕ್ಷಿಪ್ತವಾಗಿ ಸಂದಲ್ ಮೇರವಣಿಗೆ ಮಾಡಲಾಗುವದು.
ಕೋವಿಡ್ ನಿಯಮಾವಳಿ ಪ್ರಕಾರ ಸಾರ್ವಜನಿಕರಿಗೆ ದರ್ಗಾ ಪ್ರವೇಶ ನಿಷೇಧಿಸಲಾಗಿದೆ. ಯಾತ್ರಾರ್ಥಿಗಳಿಗೆ ದರ್ಗಾದಲ್ಲಿ ಅನುಮತಿ ಇರುವದಿಲ್ಲ, ಹಾಗಾಗಿ ಭಕ್ತರು ಉರುಸ್ ನಲ್ಲಿ ಪಾಲ್ಗೊಳ್ಳಲು ಬರಬಾರದು, ತಮ್ಮ ತಮ್ಮ ಮನೆಯಿಂದಲೇ ಭಕ್ತಿ ಸಲ್ಲಿಸಬೇಕು. ಸಂದಲ್, ಕವಾಲಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಆನ್ ಲೈನ್ ವಿಕ್ಷಿಸಬಹುದಾಗಿದೆ ಎಂದು ದರ್ಗಾದ ಸಜ್ಜಾದ ನಾಶಿನ್ ಡಾ. ಸೈಯದ್ ಷಾ ಗೆಸುದರಾಜ್ ಖುಸ್ರೊ ಹುಸೇನಿ ತಿಳಿಸಿದ್ದಾರೆ.
ಪ್ರತಿವರ್ಷ ಉರುಸ್ ಗೆ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು.