ಜಿಲ್ಲಾ ಸುದ್ದಿ

ಉತ್ತರ ಕನ್ನಡದಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ದರ; ಜನರ ಆಕ್ರೋಶ

ಕಾರವಾರ : ಲಾಕ್​ಡೌನ್​​ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆ ತೈಲ ದರ ಏರಿಕೆ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ 100ರ ಗಡಿ ದಾಟಿದೆ. ಶಿರಸಿಯಲ್ಲಿ ನಿನ್ನೆ ನೂರರ ಗಡಿ ದಾಟಿದ್ದ ಪೆಟ್ರೋಲ್ ದರ ಇಂದು ಜಿಲ್ಲೆಯಾದ್ಯಂತ ಹೆಚ್ಚಿದೆ. ಕಾರವಾರದಲ್ಲಿ ಸಾಮಾನ್ಯ ಪೆಟ್ರೋಲ್ 100.14 ರೂ.ಇದ್ದು,ಡೀಸೆಲ್ ದರ 92.88 ರೂ.ತಲುಪಿದೆ.ಶಿರಸಿಯಲ್ಲಿ ಇಂದು ಸಾಮಾನ್ಯ ಪೆಟ್ರೋಲ್ ದರ 100.58 ರೂ.ಇದ್ದು, ಡೀಸೆಲ್ ದರ 93.23 ರೂ‌.ಗೆ ಏರಿದೆ.

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಈ ರೀತಿ ತೈಲ ಬೆಲೆ ಏರಿಕೆ ಜನರಿಗೆ ಚಾಟಿ ಏಟು ನೀಡಿದಂತಾಗಿದೆ.100ರೂ.‌ ನೀಡಿದರೂ ಒಂದು ಲೀಟರ್ ಪೆಟ್ರೋಲ್ ಸಿಗದ್ದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಲಾಕ್​ಡೌನ್​​ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆ ತೈಲ ದರ ಏರಿಕೆ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಜನರು ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button