ಜಿಲ್ಲಾ ಸುದ್ದಿ
ಕವಿ ಪ್ರೊ.ವಸಂತ ಕುಷ್ಟಗಿ ನಿಧನ

ಕವಿ ಪ್ರೊ.ವಸಂತ ಕುಷ್ಟಗಿ (85) ಇಂದು ಬೆಳಗ್ಗೆ ಹೃದಯಾಘಾತಗೊಂಡು ಕೊನೆಯುಸಿರೆಳೆದಿದ್ದಾರೆ. ರಕ್ತದೊತ್ತಡ ಕಡಿಮೆಯಿದ್ದರಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.
1995ರಲ್ಲಿ ಕರ್ನಾಟಕದ ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಪರಿಸ್ಕರಣೆಗೊಳ್ಳುವಾಗ ಕನ್ನಡ ಪದ್ಯಗಳಲ್ಲಿ ಪ್ರೊ.ವಸಂತ ಕುಷ್ಟಗಿಯವರ ʼಹಾರೈಕೆʼ ಪದ್ಯವನ್ನು ಅಳವಡಿಸಲಾಗಿತ್ತು. ಹಲವಾರು ಕಾವ್ಯ, ದಾಸಸಾಹಿತ್ಯ, ಗದ್ಯ ಸಂಕಲನ, ಕವನ ಸಂಕಲನ, ಸಂಪಾದನೆ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದರು.