ಚನ್ನಪಟ್ಟಣ ಸಾರಿಗೆ ಡಿಫೋದಲ್ಲಿ ಕಂಡಕ್ಟರ್ ಬಾಕ್ಸುಗಳ ಕಳವು

ರಾಮನಗರ: ಸಾರಿಗೆ ಸಂಸ್ಥೆಯ ನೌಕರರ ಬಾಕ್ಸಿನಲ್ಲಿ ಹಣ ಇಟ್ಟಿದ್ದಾರೆಂದು ಭಾವಿಸಿದ ಕಳ್ಳರು ಕೊಠಡಿಯ ಬೀಗ ಹೊಡೆದು ೨೦ ಕ್ಕೂ ಹೆಚ್ಚು ಬಾಕ್ಸುಗಳನ್ನು ಕಳುವು ಮಾಡಿರುವ ಘಟನೆ ಇಲ್ಲಿನ ಸಾರಿಗೆ ಸಂಸ್ಥೆ ಡಿಪೋದಲ್ಲಿ ನಡೆದಿದೆ.
ಚನ್ನಪಟ್ಟಣದ ಸಾತನೂರು ರಸ್ತೆಯ ಬಳಿ ಇರುವ ಸಾರಿಗೆ ಸಂಸ್ಥೆಗೆ ನುಗ್ಗಿದ ಕಳ್ಳರು, ಬಸ್ ನಿರ್ವಾಹಕರ ಬಕ್ಸ್ ಕಳುವು ಮಾಡಿ, ಬಾಕ್ಸಿನಲ್ಲಿದ್ದ ಲಕ್ಷಂತರ ರೂ. ಮೌಲ್ಯದ ಬಸ್ ಟಿಕೇಟ್ಗಳನ್ನು ಬೀಸಾಡಿದ್ದಾರೆ.
ಕಳೆದ ಎರಡು ತಿಂಗಳುಗಳಿಂದಲೂ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಹಾಗೂ ಕೊರೋನಾ ಲಾಕ್ಡೌನ್ನಿಂದಾಗಿ ಸಾರಿಗೆ ನೌಕರರರು ಡಿಪೋಗೆ ಕಡೆ ಮುಖ ಮಾಡುತ್ತಿಲ್ಲ. ಆದರಲ್ಲೂ ನಿರ್ವಾಹಕರು ತಮ್ಮ ಬಳಿಯಲ್ಲಿರುವ ಟಿಕೆಟ್ ಹಾಗೂ ಚಿಲ್ಲೆರೆ ಹಣವನ್ನು ಬಾಕ್ಸ್ನಲ್ಲಿಟ್ಟು ತಮ್ಮ ಕೊಠಡಿಯಲಿಟ್ಟಿದ್ದರು.
ಡಿಪೋದಲ್ಲಿ ಭದ್ರತಾ ಸಿಬ್ಬಂದಿಯ ಪಾಳಿ ಇದ್ದರೂ ನಿರ್ವಾಹಕರು ತಮ್ಮ ವಸ್ತುಗಳನ್ನು ಬದಲಾಯಿಸುವ ಹಾಗೂ ಬಾಕ್ಸ್ಗಳನ್ನಿಡುವ
ಕೊಠಡಿಯ ಬಾಗಿಲು ಹೊಡೆದಿರುವ ಕಳ್ಳರು, ಕೊಠಡಿಯಲ್ಲಿ ೨೦ ಕ್ಕೂ ಹೆಚ್ಚು ಬಾಕ್ಸ್ಗಳನ್ನು ಹೊತ್ತುಕೊಂಡು ಹೋಗಿದ್ದಾರೆ, ಡಿಪೋದ ಹಿಂಬಾದಲ್ಲಿರುವ ಕೊಳಚೆ ನೀರು ಹರಿಯುವ ಚರಂಡಿಯ ಬಳಿ ಬಾಕ್ಸ್ ಹೊಡೆದು ಹಣಕ್ಕಾಗಿ ತಪಾಸಣೆ ಮಾಡಿದ ಕಳ್ಳರು ಕೈಗೆ ಸಿಕ್ಕ ಚಿಲ್ಲರೆ ಹಣವನ್ನು ಎತ್ತಿಕೊಂಡು, ಮ್ಯಾನುವಲ್ ಟಿಕೆಟ್ಗಳನ್ನು ಹಾಗೂ ಬಾಕ್ಸ್ಗಳನ್ನು ಚರಂಡಿಗೆ ಬೀಸಾಡಿ ಹೋಗಿದ್ದಾರೆ.
ಪ್ರತಿಯೊಬ್ಬರ ಬಾಕ್ಸ್ನಲ್ಲಿದ್ದ ಸಾವಿರಾರು ಚಿಲ್ಲರೆ ಹಣ ಮತ್ತು ೧೦ ರಿಂದ ೧೫ ಸಾವಿರರೂ ಮೌಲ್ಯದ ಮ್ಯಾನುವಲ್ ಟಿಕೆಟ್ಗಳು ಇದ್ದವೆಂದು ಹೇಳಲಾಗಿದ್ದು, ಎಲ್ಲಾ ಬಾಕ್ಸ್ಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಟಿಕೆಟ್ಗಳನ್ನು ಕಳ್ಳರು ನಾಶಮಾಡಿದ್ದಾರೆ.
ಬಸ್ನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವಾಗ, ಟಿಕೆಟ್ಯಂತ್ರ ಕೈಕೊಟ್ಟ ಸಂದರ್ಭದಲ್ಲಿ ನಿರ್ವಾಹಕರ ಬಾಕ್ಸ್ನಲ್ಲಿರುವ ಟಿಕೆಟ್ಗಳನ್ನೇ
ಪ್ರಯಾಣಿಕರಿಗೆ ನೀಡುವುದರಿಂದ, ಟಿಕೆಟ್ಗಳ ಸಂಪೂರ್ಣ ಜಾವಾಬ್ದಾರಿ ನಿರ್ವಾಹಕರದೇ ಆಗಿರುತ್ತದೆ.
ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಬಿಗಿ ಭದ್ರತೆ ಇದೆ. ಸುತ್ತಲೂ ಸೂಕ್ತವಾದ ಭದ್ರವಾದ ಕಾಪೌಂಡ್ ಇದೆ. ಮುಂಬಾಗದಲ್ಲಿ ಬೃಹತ್ ಗೇಟ್ ಹಾಕಲಾಗಿದ್ದು,ಯಾರೇ ಬಂದರೂ ಪಾಳೀಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ ವರ್ಗವಿದ್ದಾರೆ. ಆದರೂ ಭದ್ರತಾ ಸಿಬ್ಬಂದಿಯನ್ನು ಕಣ್ತಪ್ಪಿಸಿ ಈ ಕಳವು ಮಾಡಿರುವುದನ್ನು ಗಮನಿಸಿದರೆ ಭದ್ರತಾ ವೈಪಲ್ಯ ಕಾರಣವೆಂದು ಹೇಳಲಾಗುತ್ತಿದೆ.
ಕೊಠಡಿಯಲ್ಲಿ ೨೦ಕ್ಕೂ ಹೆಚ್ಚು ಬಾಕ್ಸ್ಗಳನ್ನು ಕಳ್ಳರು ಕದಿಯಬೇಕಾದರೆ, ಡಿಪೋಗೆ ಹೆಚ್ಚು ಕಳ್ಳರು ನುಗ್ಗಿರುವ ಸಾಧ್ಯತೆ ಇದೆ. ಕಾರಣ ಎಲ್ಲಾ ಬಾಕ್ಸ್ಗಳನ್ನು ಹೊರಗಡೆ ಸಾಗಿಲು ಒಬ್ಬರು ಇಬ್ಬರಿಂದ ಸಾದ್ಯವಿಲ್ಲ ಎನ್ನುವ ಅನುಮಾನವು ವ್ಯಕ್ತವಾಗಿದೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.