ರಾಮನಗರ

ಕೇಂದ್ರ, ರಾಜ್ಯ ಸರ್ಕಾರದಿಂದ ಸಾವಿನ ಸುಳ್ಳು ಲೆಕ್ಕ: ಎಂ ಬಿ ಪಾಟೀಲ್

ರಾಮನಗರ: ಕೊರೊನ ೨ನೇ ಅಲೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿಭಾಯಿಸುವಲ್ಲಿ ವಿಫಲವಾಗಿವೆ. ಜೊತೆಗೆ ಕೊರೊನ ಸಾವಿನಲ್ಲೂ ಸುಳ್ಳು ಲೆಕ್ಕ ಹೇಳಿದ್ದು, ಸರ್ಕಾರ ಹೇಳಿದ್ದೆ ಒಂದು ಲೆಕ್ಕ ರಾಜ್ಯದಲ್ಲಿ ಸಾವಾಗಿರುವುದು ಇನ್ನೊಂದು ಲೆಕ್ಕ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಮಾಗಡಿಯ ಹಳೇ ಬಸ್ ನಿಲ್ದಾಣದಲ್ಲಿ ಕೆ.ಪಿ.ಮಹದೇವಶಾಸ್ತ್ರಿ ಸಹಕಾರದೊಟ್ಟಿಗೆ ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಾವಿನಲ್ಲೂ ಸುಳ್ಳು ಲೆಕ್ಕಾ ಕೊಟ್ಟಿದ್ದಾರೆ, ಆಕ್ಸಿಜನ್ ಬೆಡ್ ಸಿಗದೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ನರೇಂದ್ರ ಮೋದಿರವರು ವಿಶ್ವ ಗುರು ಆಗಲು ಹೊರಟು ಅಗತ್ಯ ಇರುವಷ್ಟು ವ್ಯಾಕ್ಸಿನ್ಉತ್ಪಾದನೆ ಮಾಡುವಲ್ಲಿ ವಿಫಲರಾಗಿದ್ದಾರೆ. ೧೦೦ ಕೋಟಿ ಜನಗಳಿಗೆ ಲಸಿಕೆ ಹಾಕಿದಾಗ ಮಾತ್ರ ಕೊರೊನ ನಿಯಂತ್ರಣಕ್ಕೆ ಬರುತ್ತದೆ, ಸರ್ಕಾರ ಭವಿಷ್ಯದಲ್ಲಿ
ಆರೋಗ್ಯ ಸೇವೆ ಉತ್ತಮಗೊಳಿಸುತ್ತೇವೆಂದು ಹೇಳುವುದನ್ನು ನಿಲ್ಲಿಸಿ ಈಗ ಏನು ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದ ರುವಾರಿ ಕೆ.ಪಿ.ಮಹದೇವಶಾಸ್ತ್ರಿ ಮಾತನಾಡಿ, ಪಕ್ಷಾತೀತವಾಗಿ ತಾಲೂಕಿನಲ್ಲಿ ಸೇವೆ ಮಾಡುತ್ತಿದ್ದೇನೆ. ತಾಲೂಕಿಗೆ ನಿರಂತರವಾಗಿ ನನ್ನ ಸೇವೆ ಮುಂದುವರಿಸುತ್ತೇನೆ. ವೀರಶೈವ ಸಮಾಜದ ಪರವಾಗಿ ಇರುತ್ತೇನೆ. ೨೦೨೩ರ ಎಂಎಲ್‌ಎ ಚುನಾವಣೆಯಲ್ಲಿ
ನಮ್ಮ ನಾಯಕರಾದ ಹೆಚ್.ಸಿ.ಬಾಲಕೃಷ್ಣರವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಬೇಕು. ನಮ್ಮ ಸಮೂದಾಯ ಹೆಚ್.ಸಿ.
ಬಾಲಕೃಷ್ಣ ಪರವಾಗಿ ನಿಲ್ಲೋಣ ಎಂದು ತಿಳಿಸಿದರು.

ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಸೂಲಿಗೆ ಇಳಿದಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಿಸಿ ಸಾಮಾನ್ಯ ಜನರನ್ನು ಕಂಗೆಡುವಂತೆ ಮಾಡಿದ್ದಾರೆ, ಇದೇ ಸರ್ಕಾರದ ನೀತಿಯಾಗಿದೆ, ಮನ್ ಕೀ ಬಾತ್ ಮಾತನಾಡುವ ಮೋದಿರವರು ಕೊರೊನ ಬಂದಾಗಲೇ ವ್ಯಾಕ್ಸಿನ್‌ನ್ನು ಉಚಿತವಾಗಿ ಕೊಟ್ಟಿದ್ದರೆ ಗೌರವ ಬರುತ್ತಿತ್ತು ಎಂದರು.

ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿ, ಕೊರೊನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನರ ಪರವಾಗಿ ನಿಂತಿದ್ದೇವೆ, ಕೊರೊನ ವಾರಿಯರ್ಸ್ಗಳಿಗೆ ದಿನಸಿ ಕಿಟ್ ಪ್ರೋತ್ಸಾಹ ಧನ ನೀಡಿದ್ದೇವೆ, ಎಂ.ಬಿ.ಪಾಟೀಲ್ ರವರು ತಮ್ಮ ಆಸ್ಪತ್ರೆಯಲ್ಲಿ ೬೦ ರಷ್ಟು ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ, ೩ನೇ ಅಲೆಗೂ ಸಿದ್ದತೆ ಮಾಡಿಕೊಂಡಿದ್ದಾರೆ, ಹಲವು ಶಾಸಕರು ಕೊವಿಡ್ ಸಮಯದಲ್ಲಿ ಉತ್ತಮ ಕೆಲಸ
ಮಾಡಿದ್ದಾರೆಂದರು.

ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು, ಇದೇ ವೇಳೆ ಮಾಜಿ
ಸಚಿವ ಹೆಚ್.ಎಂ.ರೇವಣ್ಣ, ಕಾಂಗ್ರೆಸ್ ಮುಖಂಡರಾದ ಬೆಳಗುಂಬ ವಿಜಿ, ಎಂ.ಕೆ.ಧನಂಜಯ್ಯ, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ಪುರುಷೋತ್ತಮ್, ಪೊಲೀಸ್ ವಿಜಿ, ಮಂಡಿ ಗುರು, ತೇಜು, ಗಾಣಕಲ್ ನಟರಾಜ್, ಬೆಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ರಘುವೀರ್ ಗೌಡ ಮುಂತಾದವರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button