ಬೆಲೆ ಸಿಗದ ಹಿನ್ನೆಲೆ; ಬಾಳೆ ತೋಟ ನಾಶಪಡಿಸಿದ ರೈತರು

ರಾಮನಗರ: ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆ ಕಟಾವಿಗೆ ಬಂದಿದ್ದ ಬಾಳೆಗಿಡಗಳನ್ನ ಟ್ರಾಕ್ಟರ್ ಮೂಲಕ ರೈತರೊಬ್ಬರು ನಾಶ ಪಡಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ರೈತರೊಬ್ಬರು ಕಟಾವಿಗೆ ಬಂದಿದ್ದ ಬಾಳೆ ತೋಟವನ್ನು ರೋಟೋವೆಟರ್ ಮೂಲಕ ನೆಲಸಮ ಮಾಡಿದ್ದಾರೆ.
ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ನಾಗರಾಜು ಹಾಗೂ ಅವರ ಮಗ ಸಿದ್ದೇಶ್ ಟ್ರಾಕ್ಟರ್ ಮೂಲಕ ಬಾಳೆ ತೋಟವನ್ನು
ಸುಮಾರು 3.50 ಎಕರೆ ಬಾಳೆ ಬೆಳೆಯನ್ನ ಸ್ವತಃ ರೈತನೆ ನಾಶ ಮಾಡಿದ್ದಾರೆ.
ಬಾಳೆ ಬೆಳೆಗೆ ಸುಮಾರು 4 ಲಕ್ಷ ಹಣ ಖರ್ಚು ಮಾಡಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮನನೊಂದಯ ಬೆಳೆ ನಾಶ ಮಾಡಿದ್ದಾರೆ. ಕೆಜಿ ಬಾಳೆಗೆ ೨೦ ರೂ. ದರವಿಲ್ಲ, ಕೊರೊನಾ ಹಿನ್ನಲೆಯಲ್ಲಿ ಬಾಳೆ ಎಲೆಯನ್ನು ಯಾರು ಕೊಳ್ಳುತ್ತಿಲ್ಲ. ಸರ್ಕಾರವು ನಮ್ಮ ಸಹಾಯಕ್ಕೆ ಬರುತ್ತಿಲ್ಲವೆಂದು ಆಕ್ರೋಶದಿಂದ ಬಾಳೆ ತೊಟವನ್ನೇ ನಾಶ ಪಡಿಸಿದ್ದಾರೆ.
ಅದೇ ರೀತಿ ಗರಕ್ಕಹಳ್ಳಿ ಗ್ರಾಮದ ಜಮೀನಿನಲ್ಲಿ ರೈತ 3 ಎಕರೆ ಟೊಮ್ಯಾಟೊ ಬೆಳೆಯನ್ನ ಕಟಾವು ಮಾಡದೇ ಗಿಡದಲ್ಲೆ ಬಿಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಟೊಮ್ಯಾಟೊಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಗಿಡದಲ್ಲೆ ಟೊಮ್ಯಾಟೊ ಬಿಟ್ಟಿದ್ದಾನೆ ಎಂದು ರೈತ ಸಿದ್ದೇಶ್ ತಿಳಿಸಿದ್ದಾರೆ.