ರಾಮನಗರ
ಸಂಸದರಿಂದ 5 ಸಾವಿರ ಮಂದಿಗೆ ಆಹಾರ ಕಿಟ್

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಖಾಸಗಿ ಶಾಲಾ ಶಿಕ್ಷಕರು, ರಂಗಭೂಮಿ ಮತ್ತು ಜಾನಪದ ಕಲಾವಿಧರು, ಸಾರಿಗೆ ಸಂಸ್ಥೆ ನೌಕರರು, ಆಶಾಕಾರ್ಯಕರ್ತೆರು ಮತ್ತು ಕಾಂಗ್ರೆಸ್ ಸೇವಾದಳ ಕಾರ್ಯಕರ್ತರಿಗೆ 5 ಸಾವಿರಕ್ಕೂ ಉಚಿತ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಸಂಸದ ಡಿ.ಕೆ. ಸುರೇಶ್ ರಾಮನಗರದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸುರೇಶ್, ಖಾಸಗಿ ಶಾಲಾ ಶಿಕ್ಷಕರು, ಸಾರಿಗೆ ಸಂಸ್ಥೆಯ ನೌಕರರು ಸೇರಿದಂತೆ ಹಲವು ಮಂದಿ ಲಾಕ್ ಡೌನ್ ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಅವರಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಸಿಎಂ ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಜಿ.ಪಂ ಮಾಜಿ ಅಧ್ಯಕ್ಷ ಇಕ್ಭಾಲ್ ಹುಸೇನ್, ಕೆ. ರಮೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಕಾಂತರಾಜ್ ಪಟೇಲ್, ರವರುˌˌಜಿಪಂ ಮಾಜಿ ಮುಖಂಡ ಕೆ. ಶೇಷಾದ್ರಿ, ಎ.ಬಿ ಚೇತನ್ ಕುಮಾರ್, ಕಂಟ್ರಾಕ್ಟರ್ ಜಗದೀಶ್ ಮುಂತಾದವರಿದ್ದರು.