ರಾಮನಗರ

ಸಾವಿರಾರು ಜನರಿಗೆ ದಿನಸಿ ಕಿಟ್ ನೀಡುತ್ತಿರುವ ಗೋವಿಂದರಾಜು ಸೇವೆಗೆ ಶ್ಲಾಘನೆ 

ರಾಮನಗರ: ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಸಾವಿರಾfರು ಮಂದಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುತ್ತಿರುವ ಗೋವಿಂದರಾಜು ಅವರ ಕಾರ್ಯ ಶ್ಲಾಘನಾರ್ಹವಾಗಿದ್ದು, ಅವರು ಇನ್ನಷ್ಟು ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಜಿಲ್ಲಾ ಅರ್ಚಕರು ಮತ್ತು ಪುರೋಹಿತರ ಸಂಘದ ಕಾರ್ಯದರ್ಶಿ ರಾಘವೇಂದ್ರ ಮಯ್ಯ ಪ್ರಾರ್ಥಿಸಿದರು.

ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿರುವ ಕರಣ್‌ಗೌಡ ಫಾರಂನಲ್ಲಿ ಅರ್ಚಕರು, ಪುರೋಹಿತರು ಹಾಗೂ ಬಡ ಬ್ರಾಹ್ಮಣರಿಗೆ ಸಮಾಜಸೇವಕ ಗೋವಿಂದರಾಜು ಅವರು ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ದಿನನಿತ್ಯ ದೇವರ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿರುವ ಈ ವರ್ಗ ಲಾಕ್‌ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಈ ಸಮಯದಲ್ಲಿ ನಮ್ಮ ನೆರವಿಗೆ ಮುಂದಾಗಿರುವ ಗೋವಿಂದರಾಜು ಅವರಿಗೆ ಭಗವಂತ ಇನ್ನಷ್ಟು ಸೇವೆಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಭಗವಂತ ನಮಗೆ ಸಂಪತ್ತನ್ನು ಕರುಣಿಸುವುದು ದಾನಮಾಡಲಿಕ್ಕೆ ಎಂಬುದನ್ನು ಅರಿತು, ಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಂತಿರುವ ಗೋವಿಂದರಾಜು ಅವರಿಗೆ ಭಗವಂತ ಆಯುಷ್ಯ, ಆರೋಗ್ಯ ಹಾಗೂ ಸಂಪತ್ತನ್ನು ಕರುಣಿಸಿ, ಇನ್ನೂ ಹೆಚ್ಚು ಹೆಚ್ಚು ದಾನಮಾಡುವ ಶಕ್ತಿಯನ್ನು ನೀಡಲಿ. ಅವರ ಕೀರ್ತಿ ಹೆಚ್ಚಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದರಾಜು, ಸ್ನೇಹಿತರ ಸಲಹೆಯಂತೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದು, ದೇವರ ದಯದಿಂದ ಈ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ತಾಲೂಕು ಬ್ರಾಹ್ಮಣರ ಸಂಘದ ನಿರ್ದೇಶಕರಾದ ಕೆ.ವಿ.ಮದುಸೂಧನ್, ನಂದಕುಮಾರ್, ಅರ್ಚಕರ ಸಂಘದ ಜಿಲ್ಲಾ ಖಜಾಂಚಿ ನರಸಿಂಹ, ತಾಲೂಕು ಕಾರ್ಯದರ್ಶಿ ನರಸಿಂಹ ಭಟ್ಟರ್,ಪತ್ರಕರ್ತ ಚಿನ್ನಗಿರೀಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button