ರಾಮನಗರ
ಪಕ್ಷಕ್ಕೆ ಮಾತು ಕೊಟ್ಟಿದ್ದರಿಂದ ನಾವ್ಯಾರೂ ಮಾತಾಡಲ್ಲ: ಮಾಧುಸ್ವಾಮಿ

ರಾಮನಗರ: ಪಕ್ಷದಲ್ಲಿ ಮಾತು ಕೊಟ್ಟಿದ್ದೇವೆ ನಾವ್ಯಾರೂ ಮಾತನಾಡೊಲ್ಲ ಅಂತ ಅಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ರಾಮನಗರದ ಬಿಡದಿಯಲ್ಲಿ ಮಾತನಾಡಿದ ಅವರು, ಕೇಸ್ ಮುಗಿದರೇ ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾಗುತ್ತಾರೆ.ಅವರು ಆ ಒಂದು ಕೇಸ್ ನಲ್ಲಿ ಸಿಲುಕಿದ್ದು,
ಹಾಗಾಗಿ ನೈತಿಕ ಹೊಣೆ ಹೊತ್ತು ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಸು ಎಂದು ಹೇಳಿದರು.
ಪಕ್ಷದ ವಿರುದ್ಧ ಮಾತನಾಡುವವರು ದೊಡ್ಡವರು. ಅವರು ಮಾತನಾಡುತ್ತಾರೆ. ಸರಕಾರದ ಭಾಗವಾಗಿರುವ ನಾನು ಏನೂ ಮಾತನಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ರು.
ವಿರೋಧ ಪಕ್ಷಗಳ ಮುಖಂಡರು ಮಾತನಾಡುತ್ತಾರೆ. ಜಾರಕಿಹೊಳಿ ಕೇಸಿನಲ್ಲಿ ಯಾವುದೆ ಹುರುಳಿಲ್ಲ ಅಂತ ನಾನು ಈ ಹಿಂದೆ ಹೇಳಿದ್ದೆ. ನಮ್ಮ ಪಕ್ಷದ ವರಿಷ್ಠರು ರಾಜ್ಯಕ್ಕೆ ಬಂದು ಹೋದ ಮೇಲೆ ಯಾರು ಕೂಡ ಹೇಳಿಕೆಗಳನ್ನ ನೀಡುತ್ತಿಲ್ಲವೆಂದು ಸಚಿವ ಮಾಧುಸ್ವಾಮಿ ಹೇಳಿದರು.