ರಾಮನಗರ

ಶಾಸಕರ ದೆಹಲಿ ಭೇಟಿ ಬಗ್ಗೆ ಗೊತ್ತಿಲ್ಲ; ರಾಜಕೀಯ ಮಾತನಾಡಲ್ಲ: ಯೋಗೇಶ್ವರ್

ರಾಮನಗರ: ಶಾಸಕ ಅರವಿಂದ್ ಬೆಲ್ಲದ್ ಮತ್ತು ಕೆಲ‌ ಶಾಸಕರು ದೆಹಲಿ ತೆರಳಿರುವುದು ತಮಗೇನು ಗೊತ್ತಿಲ್ಲವೆಂದು‌ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬೆಲ್ಲದ್ ದೆಹಲಿಗೆ ಹೋಗಿರುವ ಬಗ್ಗೆ ನನಗೆ ಗೊತ್ತಿಲ್ಲ, ನಾನು ರಾಜಕೀಯ ಮಾತನಾಡಲ್ಲವೆಂದರು.

ಸಿಎಂ ಯಡಿಯೂರಪ್ಪ ಮುಂದುವರೆಯುವ ವಿಚಾರದ ಬಗ್ಗ ಒಲ್ಲದ ಮನಸ್ಸಿನಿಂದಲೇ ಉತ್ತರಿಸಿದ ಯೋಗೇಶ್ವರ್, ಈಗ ಮುಖ್ಯಮಂತ್ರಿಯಾಗಿ ಮುಂದೂವರೆಯುವುದಕ್ಕೆ ಯಾರು ಬೇಡ ಎಂದಿದ್ದಾರೆ ಎಂದರು.

ಪಕ್ಷದ ವರಿಷ್ಠರು ಹೇಳಿದ್ದಾರೆ. ಸ್ವತಃ ಸಿಎಂ ಯಡಿಯೂರಪ್ಪ ನವರೇ ಅವರ ಧ್ವನಿಯಲ್ಲಿಯೇ ಹೇಳಿದ್ದಾರೆ.ಮುಂದಿನ 2 ವರ್ಷ ನಾನೇ ಸಿಎಂ ಎಂದು.ಹಾಗಾಗಿ ಈ ವಿಚಾರವಾಗಿ ನಾನು ಮಾತನಾಡಲ್ಲವೆಂದರು. ಅಲ್ಲದೆ ತಾವು ರಾಜಕೀಯವಾಗಿ ಮಾತನಾಡಬಾರದು ಅಂದುಕೊಂಡಿದ್ದೇನೆ. ನಮ್ಮನ್ನು ಸುಮ್ನೆ ಬಿಟ್ಬಿಡಿ ಎಂದು ಮಾಧ್ಯಮಗಳ ಪ್ರತಿನಿಧಿಗಳಿಗೆ ಕೈ ಮುಗಿದರು.

ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ವಿಚಾರದ ಪ್ರತಿಕ್ರಿಸಿ,ಅವರು ನಮ್ಮ ನಾಯಕರು ಶಾಸಕರನ್ನ ಭೇಟಿಯಾಗಲು ಬರ್ತಿದ್ದಾರೆ.
ನಾನು ಸಹ ಅವರನ್ನ ಭೇಟಿ ಮಾಡ್ತೇನೆ. ಸರರ್ಕರ ಕೊಂಚ ವೇಗವಾಗಿ ನಡೆಯಲು ಬಯಸಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಉಪಮುಖ್ಯಮಂತ್ರಿಗಳು ಮಠಾಧೀಶರ ಸಭೆ ನಡೆಸಿರುವುದು ತಮಗೆ ಗೊತ್ತಿಲ್ಲ. ಅದ್ದರಿಂದ ಸಭೆ ನಡೆಸಿದವರನ್ನು ನೀವು ಕೇಳಬೇಕೆಂದರು.

ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಲವೇಗೌಡ, ಜಿ.ಪಂ. ಮಾಜಿ ಸದಸ್ಯ ಸದಾನಂದ, ಸಿ.ಪಿ. ನಾಗೇಶ್ ಮುಂತಾದವರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button