ರಾಮನಗರ
ಜಮೀರ್ ವಿರುದ್ಧ ಯುವ ಜೆಡಿಎಸ್ ಕಿಡಿ

ರಾಮನಗರ: ನಮ್ಮ ನಾಯಕರಾದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಏಕವಚನ ಪ್ರಯೋಗ ಮಾಡಿರುವ ಜಮೀರ್ ಮಹಮದ್ ಖಾನ್ ಗೆ ರಾಮನಗರ ಯುವ ಜೆಡಿಎಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರಾಮನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಗೂಳಿಗೌಡ ಹಾಗೂ ಮುಖಂಡರು, ಸುದ್ದಿಗೋಷ್ಠಿ ನಡೆಸಿ ಜಮೀರ್ ವಿರುದ್ಧ ಕಿಡಿಕಾರಿದರು.
ನಮ್ಮ ನಾಯಕರು ಪಲ್ಟಿ ಗಿರಾಕಿ ಅಲ್ಲ. ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್ ನಾಯಕರಿಂದ ಹಣ ಪಡೆದು ಕ್ರಾಸ್ ಓಟ್ ಮಾಡಿ ಪಲ್ಟಿ ಹೊಡೆದ ಗಿರಾಕಿ ಯಾರು? ಇದನ್ನ ಜಮೀರ್ ನೆನಪಿಸಿಕೊಳ್ಳಲಿ ಅಂತಾ ಗೂಳಿಗೌಡ ಕಿಡಿಕಾರಿದರು.
ನಗರಸಭಾ ಸದಸ್ಯ ಮಂಜುನಾಥ್ ಮಾತನಾಡಿ, ಜಮೀರ್ ಸಂಸ್ಕಾರ ಇಲ್ಲದ ಮನುಷ್ಯ ಒಬ್ಬ ವ್ಯಕ್ತಿಯ ಬಗ್ಗೆ ಮಾತಾನಾಡುವಾಗ ಬಾಯಿ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಒಬ್ಬ ಅವಿದ್ಯಾವಂತನ ರೀತಿ ಮಾತನಾಡುವುದನ್ನ ಜಮೀರ್ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯದ ಜೆಡಿಎಸ್ ಕಾರ್ಯಕರ್ತರು ನಿಮಗೆ ತಕ್ಕಪಾಠ ಕಲಿಸುತ್ತಾರೆ ಅಂತಾ ಎಚ್ಚರಿಕೆ ನೀಡಿದರು.