ಪ್ರಸಾದದಲ್ಲಿ ಗಾಂಜಾ ಬೆರೆಸಿ ಕೊಟ್ಟು ಮಹಿಳಾ ಭಕ್ತೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಬಾಬಾ ಅರೆಸ್ಟ್.

ಜೈಪುರ : ನಾಲ್ಕು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಬಾಬಾನನ್ನು ಜೈಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತಮ್ಮ ಆಶ್ರಮದಲ್ಲಿ ಗಾಂಜಾ ಬೆರೆಸಿದ ಪ್ರಸಾದ ನೀಡಿ ಅತ್ಯಾಚಾರ ಮಾಡಿದ್ದಾನೆ ಎಂದು ಒಂದೇ ಕುಟುಂಬದ ಮೂವರು ಮಹಿಳೆಯರು ಆರೋಪಿಸಿದ್ದಾರೆ.
ಅತ್ಯಾಚಾರ ಎಸಗುತ್ತಿದ್ದ, ಬಾಬಾನ ನಿಜವಾದ ಹೆಸರು ಯೋಗೇಂದ್ರ ಮೆಹ್ತಾ. ಮೇ 5 ರಂದು ಸಂತ್ರಸ್ತ ಕುಟುಂಬದಿಂದ ಎಫ್ಐಆರ್ ದಾಖಲಾದ ನಂತರ ಆತ ಆಶ್ರಮ ದಿಂದ ಪರಾರಿಯಾಗಿದ್ದ.
ಜೈಪುರ ಸಮೀಪದ, ಮುಕುಂದಪುರದಲ್ಲಿ ಇರುವ ಬಾಬಾನ ಆಶ್ರಮದಲ್ಲಿ ಪತಿ, ಪತ್ನಿಯ ನಡುವಿನ ವಿವಾದವನ್ನು ಬಗೆಹರಿಸಿ ಕೊಡುವಂತೆ ಸಂತ್ರಸ್ತ ಕುಟುಂಬದ ಸದಸ್ಯೆಯೊಬ್ಬರು, ಬಾಬಾ ಬಳಿ ಹೋಗಿದ್ದಾಗ, ಎಲ್ಲವನ್ನು ಬಗೆಹರಿಸಿ ಕೊಡುತ್ತೇನೆ, ನಾನು ಸರ್ವೋತ್ತಮ, ನಾನು ಗುರು, ಎಲ್ಲವನ್ನು ಗುರುಗಳಿಗೆ ಒಪ್ಪಿಸಬೇಕು ಆಗ ಎಲ್ಲವೂ ಬಗೆಹರಿಯುತ್ತದೆ ಎಂದು ಬಾಬಾ ಸಂತ್ರಸ್ತೆಯನ್ನು ನಂಬಿಸಿದ್ದ.
ಸಂತ್ರಸ್ತೆಯ ಪ್ರಕಾರ, ತಾನು ಸೇರಿದಂತೆ ತನ್ನ ಕುಟುಂಬದ ಇತರ ಇಬ್ಬರು ಮಹಿಳೆಯರನ್ನು ತಪಸ್ವಿ ಬಾಬಾ ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರನ್ನಾಗಿ ಆಶ್ರಮಕ್ಕೆ ಆಹ್ವಾನಿಸುತಿದ್ದ ಅಲ್ಲಿ ಮಹಿಳೆಯರನ್ನು ಕೋಣೆಗೆ ಆಹ್ವಾನಿಸಿ ಅವರಿಗೆ ಗಾಂಜಾ ಬೆರೆಸಿದ ಪ್ರಸಾದ ಕೊಡುತ್ತಿದ್ದ, ನಂತರ ಸಂಪೂರ್ಣ ಬೆತ್ತಲಾಗಿ ಗುರುವಿಗೆ ದೇಹವನ್ನು ಒಪ್ಪಿಸಲು ಹೇಳುತ್ತಿದ್ದ ಬಾಬಾ ನಂತರ ಅತ್ಯಾಚಾರ ಮಾಡುತ್ತಿದ್ದ ಎಂದು ಕುಟುಂಬವು ಆರೋಪಿಸಿದೆ.
ತನ್ನನ್ನು ಒಪ್ಪಿಸುವ ಮಹಿಳೆಯ ಜೀವನ ಚೆನ್ನಾಗಿರುತ್ತದೆ ಇಲ್ಲದಿದ್ದರೆ ಅವಳು ಕುಟುಂಬವು ಸಂಕಷ್ಟಕ್ಕೆ ಒಳಗಾಗಿ ಸಾಯುತ್ತಾರೆ, ಎಂದು ಬೆದರಿಕೆ ಹಾಕುತ್ತಿದ್ದ ಹೀಗೆ ಬೆದರಿಸಿ ಮೂರು ವರ್ಷಗಳಿಂದ ಬಾಬಾ ಈ ಕುಟುಂಬದ ಮಹಿಳೆಯರನ್ನು ಆಶ್ರಮಕ್ಕೆ ಕರೆಸಿ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ.
ಆಶ್ರಮದಲ್ಲಿ ತಪಸ್ವು ಮಾಡಲು,ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದ ಬಾಬಾನಿಗೆ ಭಕ್ತರ ದಂಡೆ ಇತ್ತು ಎನ್ನಲಾಗಿದೆ.
ತಲೆಮರೆಸಿಕೊಂಡು ಓಡಾಡುತ್ತಿದ್ದ ಬಾಬಾನನ್ನು ಪೊಲೀಸರು ಕಳೆದೆರೆಡು ದಿನಗಳ ಹಿಂದೆ ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, ಬಾಬಾನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಬಾಬಾ ಜೈಲು ಸೇರಿದ್ದಾನೆ.