ಜಿಲ್ಲಾ ಸುದ್ದಿ
ಗುರು ಗೌರವ; ಶಿಕ್ಷಕರಿಗೆ ಪಡಿತರ ಹಂಚಿಕೆ

ಉಡುಪಿ: ಕೋವಿಡ್ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಯುವಾಬ್ರಿಗೇಡ್ ವತಿಯಿಂದ ನಡೆಯುತ್ತಿರುವ “ಗುರು ಗೌರವ” ವೇತನವಿಲ್ಲದೆ, ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಕರಿಗೆ ರೇಷನ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದೀಗ ಯುವ ಬ್ರಿಗೇಡ್ ಕುಂದಾಪುರ ತಂಡದಿಂದಲೂ ಈ ಕಾರ್ಯ ನಡೆದಿದೆ.
ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಕರೋನ ಕಾರಣದಿಂದ ಶಾಲೆಗಳು ನಡೆಯದೆ ಅನೇಕ ಖಾಸಗಿ ಶಿಕ್ಷಕರು ಸಂಬಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು ಇಂತಹ 100ಕ್ಕೂ ಅಧಿಕ ಖಾಸಗಿ ಶಿಕ್ಷಕರಿಗೆ ನಿರಂಜನ್ ಶೆಟ್ಟಿ ನೇತೃತ್ವದಲ್ಲಿ ರೇಷನ್ ಕಿಟ್ ವಿತರಿಸಲಾಯಿತು.
ಜಿಲ್ಲೆಯಾದ್ಯಂತ ಶಿಕ್ಷಕರನ್ನು ಗುರುತಿಸಿ ಅವರುಗಳಿಗೆ ರೇಷನ್ ಕಿಟ್ಟ್ ನೀಡುವಲ್ಲಿ ಯುವ ಬ್ರಿಗೇಡ್ ನ ಯುವಕರ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ.ಈ ಸಂಧರ್ಭದಲ್ಲಿ ಯುವಾಬ್ರಿಗೇಡ್ ನ ಕಾರ್ಯಕರ್ತರಾದ ನಿರಂಜನ್ ತಲ್ಲೂರು, ವಿನೋದ್ ಕುಂದಾಪುರ, ಪ್ರಮೋದ್ ಶಂಕರನಾರಾಯಣ. ಗುರು ಖಾರ್ವಿ, ಆಕಾಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.