ದೇವನಹಳ್ಳಿಯ ಅಣ್ಣೇಶ್ವರ ಗ್ರಾ.ಪಂ. 2100 ಕುಟುಂಬಗಳಿಗೆ ದಿನಸಿ ಕಿಟ್

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಅಣ್ಷೇಶ್ವರ ಗ್ರಾಮ ಪಂಚಾಯಿತಿಯ, ಅಣ್ಣೇಶ್ವರದ ಸರ್ಕಾರಿ ಶಾಲಾ ಆವರಣದಲ್ಲಿ ಶಾಸಕ ಎಲ್ ಎನ್ ನಿಸರ್ಗ ನಾರಾಯಣ ಸ್ವಾಮಿ ದಿನಸಿ ಕಿಟ್ಗಳನ್ನು ವಿತರಿಸಿದರು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಯಾವುದೇ ರೀತಿಯ ಆದಾಯವಿಲ್ಲದೆ ಮನೆಯಲ್ಲಿ ಉಳಿದಿರುವ ಕಡು ಬಡವರು ನಿರ್ಗತಿಕರು ಹಸಿವಿನಿಂದ ಇರಬಾರದು ಅನ್ನುವ ಉದ್ದೇಶದಿಂದ ಎಲ್ಲ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡುವುದರ ಮೂಲಕ ಅಣ್ಣೇಶ್ವರ ಪಂಚಾಯಿತಿಯು ಅವರಿಗೆ ನೆರವಾಗಿರುವುದು ಶ್ಲಾಘನೀಯ ಎಂದು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಹೇಳಿದರು.
ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ನಿಂದ ಯಾರಿಗೂ ತೊಂದರೆಯಾಗಬಾರದು ಯಾರೊಬ್ಬರೂ ಮನೆಗಳಿಂದ ಹೊರಗಡೆ ಹೋಗುವಂತ ಸ್ಥಿತಿ ಉಂಟಾಗಬಾರದು ಎಂದು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 2100 ಕುಟುಂಬಗಳಿಗೆ ಹಾಗೂ ನಿರ್ಗತಿಕರಿಗೆ ಪ್ರಂಟ್ ಲೈನ್ ವಾರಿಯರ್ ಗಳಿಗೆ ಮತ್ತು ಪತ್ರಕರ್ತರಿಗೆ, ದಿನಸಿ ಕಿಟ್ ವಿತರಣೆ ಮಾಡಲು ನಾವು ತೀರ್ಮಾನ ಮಾಡಿ ಈ ಕಾರ್ಯಕ್ರಮ ಮಾಡಿದ್ದೇವೆ ಇದಕ್ಕಾಗಿ ಶಾಸಕರು ಮತ್ತು ಜಿಲ್ಲಾ ಪಂಚಾಯಿತ ಸಿಇಓ ರವಿ ಕುಮಾರ್ ಅವರು ನಮಗೆ ಅವಕಾಶ ಮಾಡಿಕೊಟ್ಟು ಪೋತ್ಸಾಹ ನೀಡಿದ್ದಾರೆ ಎಂದು ಅಣ್ಣೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವನಹಳ್ಳಿ ತಾಲೂಕಿನ ಕಾರ್ಯನಿರತ ಎಲ್ಲಾ ಪತ್ರಕರ್ತರಿಗೂ ಕೂಡ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ ಎ ರವೀಂದ್ರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಜಿ.ಪಂ ಸದಸ್ಯ ನಳಿನ ಎಂ.ಆರ್ ಮುನಿರಾಜು, ಜಿಲ್ಲಾ ಪಂಚಾಯಿತಿ ಸಿಇಒ ಶ್ರೀ ರವಿ ಕುಮಾರ್, ತಾಲ್ಲೂಕು ಪಂಚಾಯಿತಿ ಇಓ ವಸಂತಕುಮಾರ್, ಅಣ್ಣೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ,ಸದಸ್ಯರಾದ ಚಂದ್ರಶೇಖರ್, ಪಿಡಿಓ ವೆಂಕಟೇಶ್ ಇನಾಂದಾರ್ ಮತ್ತು ಗ್ರಾಮಸ್ಥರು ಇದ್ದರು.