ಜಿಲ್ಲಾ ಸುದ್ದಿ
ಪತ್ರಿಕೆ ವಿತರಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಿಕ್ಕಮಗಳೂರು: ನಗರದ ಪುರ್ಕಾನಿಯ ಶಾದಿ ಮಹಲ್ ನಲ್ಲಿ ಭಾನುವಾರ ಪತ್ರಿಕಾ ವಿತರಕರು ಮತ್ತು ಛಾಯಾಗ್ರಾಹಕರಿಗೆ ಕಾಂಗ್ರೆಸ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿ.ಎನ್ ಅಕ್ಮಲ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಜಿಲ್ಲಾ ವಕ್ತಾರ ಹಿರೇಮಗಳೂರಿ ಪುಟ್ಟಸ್ವಾಮಿ ವಿತರಿಸಿದರು.
ಈ ವೇಳೆ ಜಾಮಿಯಾ ಮಸೀದಿ ಉಪಾಧ್ಯಕ್ಷ ರಿಯಾಜ್, ಕಾರ್ಯದರ್ಶಿ ಮುದಶೀರ್, ಟೀಂ-65 ಮುಖಂಡರಾದ ಜಬಿ, ರಿಜ್ವಾನ್, ಇಮ್ರಾನ್, ನಯಾಜ್, ರಾಹುಲ್, ಸಮೀರ್, ಜಿಷಾನ್, ಇರ್ಫಾನ್, ಫರೋಜ್, ಸೈಫು, ನವಾಜ್ ಇದ್ದರು.