ಜಿಲ್ಲಾ ಸುದ್ದಿ
ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದು ಮಾಡಿ; ಸತೀಶ್ ಜಾರಕಿಹೊಳಿ ಒತ್ತಾಯ

ಬೆಳಗಾವಿ: ಪಿಯುಸಿ ಪರೀಕ್ಷೆ ರದ್ದು ಮಾಡಿದಂತೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದು ಮಾಡಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿದ ಸತೀಶ್ ಜಾರಕಿಹೊಳಿ, ಕೇಂದ್ರದಲ್ಲಿ ಒಂದು ನಿರ್ಧಾರ, ರಾಜ್ಯದಲ್ಲಿ ಒಂದು ನಿರ್ಧಾರ ಸರಿಯಲ್ಲ. ಎಲ್ಲರಿಗೂ ಒಂದೇ ಕಾನೂನು, ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ರದ್ದು ಮಾಡಿದರೆ ಒಳ್ಳೆಯದು ಎಂದರು.
ಪರೀಕ್ಷೆ ನಡೆಸಿದರೆ ಪೂರ್ವ ಸಿದ್ಧತೆ ನಡೆಸೋದು ಕಷ್ಟಸಾಧ್ಯ ಪರೀಕ್ಷೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳೋದು ನಮ್ಮ ಸರ್ಕಾರದಿಂದ ಸಾಧ್ಯವಿಲ್ಲ. ಪರೀಕ್ಷೆ ರದ್ದು ಮಾಡಿದರೆ ಮಕ್ಕಳನ್ನ ರೋಗದಿಂದ ದೂರವಿರಿಸಬಹುದು ಎಂದು ಅರು ಹೇಳಿದ್ದಾರೆ.