ಜಿಲ್ಲಾ ಸುದ್ದಿ

ಮಕ್ಕಳಗುಡಿ ಬೆಟ್ಟದ ಕೆಳಭಾಗದ ತೋಟದಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಕಿರಗಂದೂರು ಗ್ರಾಮ‌ದ ಮಕ್ಕಳ ಗುಡಿ ಬೆಟ್ಟದ ಕೆಳಭಾಗದ ತೋಟದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಮೂಡಿದೆ.

ಬೆಟ್ಟದ ಮೇಲಿನಿಂದ ಜಿಗಿದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಘಟನೆ ನಡೆದಿರಬಹುದು ಎನ್ನಲಾಗಿದ್ದು, ಸ್ಥಳದಲ್ಲಿ ತಲೆ ಬುರುಡೆ, ಮೂಳೆಗಳು, ಪ್ಯಾಂಟ್, ಜರ್ಕಿನ್ ದೊರೆತಿವೆ.

ಬೆಟ್ಟದ ಕೆಳಭಾಗದಲ್ಲಿರುವ ರೋಷನ್ ಪೂವಯ್ಯ ಅವರ ತೋಟದಲ್ಲಿ ಘಟನೆ ಬೆಳಕಿಗೆ ಬಂದಿದೆ. ಕ ಇಂದು ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿಗೆ ಮಡಿಕೇರಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪಳೆಯುಳಿಕೆಗಳನ್ನು ಕಳುಹಿಸಲಾಗಿದೆ.

ಸೋಮವಾರಪೇಟೆ ಪೊಲೀಸ್ ಇನ್ಸ್​ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಶಶಿ, ಶಿವಕುಮಾರ್, ಪ್ರವೀಣ್, ರಮೇಶ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button