ಹತ್ತು ವರ್ಷಗಳ ನಂತರ ಮನೆಗೆ ಬಂದ ಮಗ

ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ. ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ನನ್ನ ಮಗ ಇನ್ನೀಲ್ಲ ಎನ್ನುವ ಕೊರಗಿನಲ್ಲೇ ಹತ್ತು ವರ್ಷಗಳಿಂದ ದಿನದೂಡುತ್ತಿದ್ದ ಪೋಷಕರೆದುರು ಅಚ್ಚರಿ ಎಂಬಂತೆ ಶುಕ್ರವಾರ ಮಗ ದೇವರಾಜ ಪ್ರತ್ಯಕ್ಷವಾಗಿದ್ದಾನೆ.
ಹಲವು ವರ್ಷಗಳ ಬಳಿಕ ಮನೆಗೆ ಬಂದ ಮಗನನ್ನು ನೋಡಲು ಸಹರ್ಸಾರು ಸಂಖ್ಯೆಯಲ್ಲಿ ಜನರು ತಂಡೋಪ ತಂಡವಾಗಿ ಬಂದು ಶುಭ ಆರೈಸಿದರು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ದೇವಮ್ಮ ಗಂಡ ಗುರಬಸಪ್ಪ ಮಾಸ್ತರ ದಂಪತಿಯ ಮೂರು ಮಕ್ಕಳಲ್ಲಿಯ ಒರ್ವ ಮಗ ದೇವರಾಜ ಮಾಸ್ತರ ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ. ಈಗ ಕೊರೊನಾ ಭೀತಿಯಲ್ಲಿ ಕಂಪನಿಗೆ ರಜೆಯಿಂದ ಪಕ್ಕದ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದ ಸ್ನೇಹಿತ ರ ಮೂಖೇನ ಸ್ವಗ್ರಾಮಕ್ಕೆ ಹಿಂತಿರುಗಿ ಬಂದಿದ್ದಾನೆ. ದೇವರಾಜ 2008-09ರಲ್ಲಿ ಬೆಂಗಳೂರಿಗೆ ದುಡಿಯಲೆಂದು ಹೋದವನು ನಾಪತ್ತೆಯಾಗಿದ್ದ, ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು.
ಕಳೆದ ಶುಕ್ರವಾರ ಮಧ್ಯಾಹ್ನ ಜುಮಲಾಪೂರ ಗ್ರಾಮಧ ಆರಾಧ್ಯನಾದ ಪಾಂಡುರಂಗ ದೇವಾಲಕ್ಕೆ ಬಂದು ನಮಸ್ಕರಿಸುವ ಮುನ್ನ ತನ್ನ ಪರಿಚಯವನ್ನು ಹೇಳಿಕೊಂಡಾಗ ಸ್ಥಳದಲ್ಲಿದ್ದವರಿಗೆ ಆಶ್ಚರ್ಯವಾಗಿದೆ. ಮಗ ಹಿಂದಿರುಗಿರೋ ವಿಷಯವನ್ನ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದ ತಾಯಿ ದೇವಮ್ಮ, ಗುರಬಸಪ್ಪ ಮಾಸ್ತರ ದಂಪತಿ, ಮಗನನ್ನು ನೋಡಿ ಆನಂದಬಾಷ್ಪ ಸುರಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ ಬೇಸತ್ತು,ಸ್ನೇಹಿತರ ಒಲವಿನಿಂದ ತವರಿಗೆ ಬರುವ ಮನಸ್ಸು ಮಾಡಿದ್ದಾನೆ ಎಂದು ತಂದೆ ಗುರುಬಸಪ್ಪ ತಿಳಿಸಿದ್ದಾರೆ.ಮಗನ ಮರಳಿ ಗೂಡಿಗೆ ಬಂದಿರುವ ಖುಷಿಗೆ ಪಾರವೇ ಇರಲಿಲ್ಲ,ಮನೆಯ ತುಂಬ ಜನವೋ.ಜನ ಸೇರಿ ಸಂತಸದ ಕ್ಷಣಗಳನ್ನು ನೆನಪಿಸಿದರು.ತ್ವರಿತಗತಿಯಲ್ಲಿ ಮಾಹಿತಿ ಹಂಚಿಕೊಂಡ ಮನೆಯವರು,ಸ್ನೇಹಿತರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು.ಕೂಡಲೇ ಗ್ರಾಮದ ಜನಗಳು ಹಿಂಡು ಹಿಂಡಾಗಿ ಬಂದು ದೇವರಾಜ ಹಾಗೂ ಅವರ ಪಾಲಕರ ಕುಷಲೋಪರಿ ವಿಚಾರಿಸಿ ಆನಂದ ಬಾಷ್ಪ ಸುರಿಸಿದರು,
ಹತ್ತು ವರ್ಷ ಕಾದ ನಮಗೆ ಗುಡದೂರ ದೊಡ್ಡಬವರ್ಯಾ ತಾತ ನಿನ್ನ ಮಗ ಬಂದೆ ಬರುತ್ತಾನೆ ಎನ್ನುವ ವಾಕ್ಯ ನಿಜವಾಯಿತು. ಮಗ ಬಂದಿರುವುದು ನಮ್ಮ ಮನೆಯರ್ವು ಮಾಡಿದ ಪುಣ್ಯ ಕಣ್ರಿ,ಎನ್ನುತ್ತಾ ಬಂದವರಿಗೆಲ್ಲ ಸಿಹಿಹಂಚುತ್ತಾ ಲವಲವಿಕೆಯಿಂದ ದೇವರಾಜನ ತಾಯಿ ಮನೆಮಂದಿಗೆಲ್ಲ ಕರೆಮಾಡಿ.ಇವತ್ತು ಮತ್ತೆ ಮನಗೆ ದೇವರಾಜ ಬರುತ್ತಾನೆ ನೀವು ಬರ್ರಿ ಎನ್ನುತ್ತಾ.ಸಂತೋಷ ಹಂಚಿಕೊಂಡರು.