ಜಿಲ್ಲಾ ಸುದ್ದಿ
ಅಕ್ರಮ ಮರ ಕಡಿತ; ಪಕ್ರಕರಣ ದಾಖಲು

ಚಿಕ್ಕಮಗಳೂರು: ಕೊಟ್ಟಿಗೆಹಾರದ ಬಿ.ಹೊಸಳ್ಳಿ ಗ್ರಾಪಂ ಕಚೇರಿ ಹಿಂಬದಿಯಲ್ಲಿದ್ದ ಕಾಡುಜಾತಿಯ ಅನೇಕ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದ್ದು, ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಕಾಡುಜಾತಿಯ ಮರಗಳನ್ನು ಕಡಿದಿದ್ದು ಚಂದ್ರಶೇಖರ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಉಮೇಶ್ ತಿಳಿಸಿದ್ದಾರೆ.
ಗ್ರಾಪಂ.ಅಧ್ಯಕ್ಷೆ ಸುನೀತಾ ತಾಪಂ.ಇಓಗೆ ಪತ್ರ ಬರೆದಿದ್ದು, ತಮ್ಮ ಹಾಗೂ ಪಿಡಿಒ ಗಮನಕ್ಕೆ ತಾರದೆ ಬಿ.ಹೊಸಳ್ಳಿ ನೀರುಗಂಟಿ ಚಂದ್ರಶೇಖರ ಮರಗಳನ್ನು ಕಡಿದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.